ಪ್ರಧಾನಿ ಆಹ್ವಾನಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನು ರಾಜ್ಯ ಬಿಜೆಪಿ ಉಚ್ಚಾಟಿಸಿತೆ ?

State BJP Sacked ZP President from party
Highlights

ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನು ರಾಜ್ಯ ಬಿಜೆಪಿ ಉಚ್ಚಾಟಿಸಿತೆ ?

ಚಿಕ್ಕಮಗಳೂರು(ಫೆ.22): ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನು ರಾಜ್ಯ ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಪಕ್ಷದ ಕೊಟ್ಟ ಮಾತಿಗೆ ತಪ್ಪಿದ ಕಾರಣಕ್ಕಾಗಿ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣ ಪಕ್ಷದಿಂದ ಕೋಕ್ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೆ ಸುದ್ದಿ ಮಾಧ್ಯಮದವರೊಮದಿಗೆ ಮಾತನಾಡಿದ್ದ  ಚೈತ್ರಶ್ರೀ ಅವರು ತಾವು ತಳ ಸಮುದಾಯದಿಂದ ಬಂದು ಉನ್ನತ ಹುದ್ದೆಗೇರಿದ್ದು ತಮ್ಮನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಹ್ವಾನಿಸಿದ್ದಾರೆ ಎಂದಲ್ಲ ತಿಳಿಸಿದ್ದರು.

ಆದರೆ ವಾಸ್ತವದಲ್ಲಿ ಇದು ಬೇರೆಯದೆ ಆಗಿತ್ತು. ಸ್ವತಃ ರಾಜ್ಯ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿ ಜಿ.ಪಂ. ಅಧ್ಯಕ್ಷೆ ಸುಳ್ಳು ಮಾಹಿತಿ ನೀಡಿದ್ದು, ಪ್ರಧಾನಿಯವರು ಆಹ್ವಾನಿಸರಿರಲಿಲ್ಲ. ಕೊಟ್ಟ ಮಾತಿಗೆ ತಪ್ಪಿದ್ದು ಪಕ್ಷ ಕ್ರಮ ಕೈಗೊಳ್ಳುತ್ತದೆ' ಎಂದು ತಿಳಿಸಿದ್ದರು.

loader