ಕೈ ಟಿಕೆಟ್’ಗಾಗಿ ಶುರುವಾಗಿದೆ ಸ್ಟಾರ್ ವಾರ್; ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಸ್ಟಾರ್’ಗಳು

First Published 14, Mar 2018, 7:30 AM IST
Star War for Ticket
Highlights

ರಾಜ್ಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಈ ಬಾರಿ ಸ್ಟಾರ್ ಗಳಿಗೆ ಏನು ಕಡಿಮೆಯಿಲ್ಲ.  ಕೈ ಟಿಕೆಟ್ ಗಾಗಿ ಸ್ಟಾರ್ ವಾರ್ ಜೋರಾಗಿದೆ. ಚಂದ್ರಮುಖಿ, ರಾಕ್ ಲೈನ್ ಸೇರಿದಂತೆ ನಟ, ನಟಿ, ನಿರ್ಮಾಪಕರು, ರಾಜಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 

ಬೆಂಗಳೂರು (ಮಾ. 14): ರಾಜ್ಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಈ ಬಾರಿ ಸ್ಟಾರ್ ಗಳಿಗೆ ಏನು ಕಡಿಮೆಯಿಲ್ಲ.  ಕೈ ಟಿಕೆಟ್ ಗಾಗಿ ಸ್ಟಾರ್ ವಾರ್ ಜೋರಾಗಿದೆ. ಚಂದ್ರಮುಖಿ, ರಾಕ್ ಲೈನ್ ಸೇರಿದಂತೆ ನಟ, ನಟಿ, ನಿರ್ಮಾಪಕರು, ರಾಜಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 

ನಟ, ನಿರ್ದೇಶಕ, ನಿರ್ಮಾಪಕ ಆಗಿರುವ ರಾಕ್ ಲೈನ್ ವೆಂಕಟೇಶ್ ಈ ಬಾರಿ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಅಂದಹಾಗೆ ರಾಕ್ ಲೈನ್ ತಮ್ಮ ಚುನಾವಣಾ ವಾರ್ ಗೆ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿರುವ ರಾಕ್ ಲೈನ್ ಮಲ್ಲೇಶ್ವರಂ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

ಚಂದ್ರಮುಖ ಖ್ಯಾತಿಯ ನಟಿ ಭಾವನಾ ಕೂಡಾ ಈ ಬಾರಿ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದಾರೆ.. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭಾವನಾ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ.  ನಟ ಶಶಿಕುಮಾರ್ ಮತ್ತೆ ಸಕ್ರೀಯ ರಾಜಕೀಯದತ್ತ ಮುಖ ಮಾಡಿದ್ದಾರೆ.. ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ನಿರ್ಮಾಪಕ ಕೆ. ಮಂಜು ಈ ಬಾರಿ ತುರುವೆಕೆರೆಯಿಂದ ಸ್ಪರ್ಧೆಗೆ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ಅತ್ತ ನಟ ಕೌರವ ಖ್ಯಾತಿಯ ಬಿ.ಸಿ ಪಾಟೀಲ್ ಹಿರೇಕೆರೂರಿನಿಂದಲೇ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ತಯಾರಾಗಿದ್ದಾರೆ.  ರಾಜಕೀಯದಲ್ಲಿ ಕ್ಷೇತ್ರ ಹುಡುಕುತ್ತಿದ್ದ ನಟ ನಿರ್ಮಾಪಕ ಮದನ್ ಪಟೇಲ್ ಕೂಡ ಸಿ.ವಿ ರಾಮನ್ ನಗರದಿಂದ ಕಾಂಗ್ರೆಸ್ ಟಿಕೆಟ್ ಕೇಳಿ ಅರ್ಜಿ ಹಾಕಿದ್ದಾರೆ.. ಸದ್ಯಕ್ಕೆ ಕಾಂಗ್ರೆಸ್ ನಲ್ಲಿರೋ ಸ್ಟಾರ್ ಗಳಲ್ಲಿ ನಟಿ ರಮ್ಯಾ ಮಾತ್ರ ಟಿಕೆಟ್ ಕೇಳದೆ ಇರೋದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.  ಮುಂದೆ ರಮ್ಯ ಕೂಡಾ ನಾನು ಆಕಾಂಕ್ಷಿ ಅಂದ್ರೆ ಅಚ್ಚರಿಯೇನಿಲ್ಲ. 
 

loader