ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಆರ್ ಎಸ್ ಎಸ್ ಹಾಕಿರುವ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲು ಸಿದ್ಧವಾಗಿದ್ದಾರೆ.

Add Asianetnews Kannada as a Preferred SourcegooglePreferred

ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಕಾರಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಇದು ಆರ್’ಎಸ್’ಎಸ್ಸಿಗರನ್ನು ಕೆರಳಿಸಿತ್ತು. ಅವರು ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನು ರದ್ದುಗೊಳಿಸಬೇಕೆಂದು ರಾಹುಲ್ ಸುಪ್ರೀಂಗೆ ಕೇಳಿಕೊಂಡಿದ್ದರು. ಇದೀಗ ಅರ್ಜಿಯನ್ನು ವಾಪಸ್ ಪಡೆದು ಮೊಕದ್ದಮೆಯನ್ನು ನೇರಾನೇರವಾಗಿ ಎದುರಿಸುತ್ತೇನೆ ಎಂದು ರಾಹುಕಲ್ ಹೇಳಿದ್ದಾರೆ.

ಇಂದು ಸುಪ್ರೀಂ ರಾಹುಲ್ ರವರ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಧೀಶರ ಮುಂದೆ ಹಾಜರಾಗುವುದರಿಂದ ವಿನಾಯಿತಿ ಕೊಡುವುದನ್ನು ಸುಪ್ರೀಂ ನಿರಾಕರಿಸಿದೆ.