ಹೈದ್ರಾಬಾದ್‌[ಫೆ.18]: ಕೇವಲ 10 ರು. ಗೆ ಸೀರೆ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ ಮಾಲ್‌ ಒಂದರ ಮುಂದೆ ಮಹಿಳೆಯರು ಮತ್ತು ಯುವತಿಯರ ಸೇರಿ ಅವರನ್ನು ನಿಯಂತ್ರಿಸಲಾಗದೇ ಪೊಲೀಸರ ಮೊರೆ ಹೋದ ಪ್ರಸಂಗ ನಡೆದಿದೆ.

ಇಲ್ಲಿನ ಸಿದ್ದಿಪೇಟೆಯ ಸಿಎಂಆರ್‌ ಶಾಪಿಂಗ್‌ ಮಾಲ್‌ನಲ್ಲಿ ಕೇವಲ 10 ರು.ಗೆ ಸೀರೆ ಮಾರಾಟದ ಆಫರ್‌ ಪ್ರಕಟಿಸಿತ್ತು. ಈ ಸುದ್ದಿ ಸುತ್ತುಮುತ್ತಲ ಪ್ರದೇಶದಲ್ಲಿ ಹಬ್ಬಿ, ಭಾನುವಾರ ಬೆಳಗ್ಗೆ ಏಕಾಏಕಿ ಸಾವಿರಾರು ಜನ ಮಾಲ್‌ನೊಳಗೆ ನುಗ್ಗಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ.

ಇನ್ನು ಇದೇ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಭರ್ಜರಿಯಾಗಿ ಪಿಕ್‌ಪಾಕೆಟ್‌ ಕೂಡಾ ನಡೆಸಿದ್ದಾರೆ. ಹೀಗಾಗಿ ಸೀರೆ ಕೊಳ್ಳಲು ಬಂದವರು, ಚಿನ್ನದ ಸರ, ನಗದು, ಎಟಿಎಂ ಕಾರ್ಡ್‌ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರಂತೆ.