ಕಮಲ್-ರಜನಿ ರಾಜಕೀಯ ಪ್ರವೇಶದ ಬಗ್ಗೆ ಸ್ಟಾಲಿನ್ ವ್ಯಂಗ್ಯ

First Published 24, Jan 2018, 8:15 AM IST
Stalin Attack Kaml Haasan And Rajinikanth
Highlights

ಇತ್ತೀಚೆಗಷ್ಟೇ ರಾಜಕೀಯ ಪ್ರವೇಶ ಘೋಷಿಸಿರುವ ತಮಿಳು ಸೂಪರ್‌ಸ್ಟಾರ್‌ಗಳಾದ ಕಮಲ್ ಹಾಸನ್ ಮತ್ತು ರಜನೀಕಾಂತ್ ಮತ್ತು ಡಿಎಂಕೆ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಚೆನ್ನೈ: ಇತ್ತೀಚೆಗಷ್ಟೇ ರಾಜಕೀಯ ಪ್ರವೇಶ ಘೋಷಿಸಿರುವ ತಮಿಳು ಸೂಪರ್‌ಸ್ಟಾರ್‌ಗಳಾದ ಕಮಲ್ ಹಾಸನ್ ಮತ್ತು ರಜನೀಕಾಂತ್ ಮತ್ತು ಡಿಎಂಕೆ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಹೊಸ ಹಕ್ಕಿಗಳು ಹಾರಲು ಬಯಸುತ್ತವೆ, ಅವುಗಳಿಗಿರುವ ಶಕ್ತಿಗೆ ಅವು ಎಷ್ಟು ದೂರ ಹಾರಬಲ್ಲವು ಎಂದು ನೋಡಬೇಕಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ. ಪ್ರಜಾಪ್ರಭುತ್ವವನ್ನು ಆಕಾಶಕ್ಕೆ ಹೋಲಿಸಿರುವ ಸ್ಟಾಲಿನ್, ಅದು ಎಲ್ಲರಿಗೂ ಮುಕ್ತ, ಆದರೆ ಬಹುತೇಕ ಪಕ್ಷಿಗಳು ಹೆಚ್ಚು ದೂರ ಕ್ರಮಿಸಲ್ಲ. ಜನತೆಯ ಬಗ್ಗೆ ಕಾಳಜಿ ಹೊಂದಿರುವ ಡಿಎಂಕೆ ಹೆಚ್ಚು ಎತ್ತರದಲ್ಲಿ ಹಾರುತ್ತದೆ ಎಂದಿದ್ದಾರೆ.

loader