Asianet Suvarna News Asianet Suvarna News

ಎಸ್'ಎಸ್ಎಲ್'ಸಿ ಪೂರಕ ಫಲಿತಾಂಶ: ಶೇ.50 ಉತ್ತೀರ್ಣ

ಇದರಲ್ಲಿ, 73,865 ಬಾಲಕರು, 49,578 ವಿದ್ಯಾರ್ಥಿನಿಯರು ಈ ಮೂಲಕ ಪೂರಕ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮರುಮೌಲ್ಯಮಾಪನಕ್ಕೆ ಜುಲೈ 27 ಕೊನೆ ದಿನವಾಗಿದ್ದು, 700 ಶುಲ್ಕ ಪಾವತಿಸಿ ಪೋಟೋ ಕಾಪಿ ಪಡೆಯಬಹುದಾಗಿದೆ.

SSLC supplementary results Improvement in pass percentage

ಬೆಂಗಳೂರು(ಜು.14): ಜೂನ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಶೇ.50.81 ಫಲಿತಾಂಶ ಹೊರಬಂದಿದೆ.

ಮಾರ್ಚ್‌-ಏಪ್ರಿಲ್‌ನಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳ ಪೈಕಿ 2 ಲಕ್ಷ 42 ಸಾವಿರದ 951 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ, 1,23, 443 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು ಕಳೆದ ವರ್ಷದ ಫಲಿತಾಂಶಕ್ಕಿಂತ ಶೇಕಡಾ25.93 ಹೆಚ್ಚಾಗಿದೆ. ಇದರಲ್ಲಿ, 73,865 ಬಾಲಕರು, 49,578 ವಿದ್ಯಾರ್ಥಿನಿಯರು ಈ ಮೂಲಕ ಪೂರಕ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮರುಮೌಲ್ಯಮಾಪನಕ್ಕೆ ಜುಲೈ 27 ಕೊನೆ ದಿನವಾಗಿದ್ದು, 700 ಶುಲ್ಕ ಪಾವತಿಸಿ ಪೋಟೋ ಕಾಪಿ ಪಡೆಯಬಹುದಾಗಿದೆ.

ಇನ್ನು, ಇದೇ ವೇಳೆ ಮಾತನಾಡಿದ ಸಚಿವ ತನ್ವೀರ್ ಸೇಠ್, ಈ ವರ್ಷ 10 ಸಾವಿರ ಶಿಕ್ಷಕರನ್ನ ನೇಮಿಸಿಕೊಳ್ಳುವುದಕ್ಕೆ ಅನುಮೋದನೆ ಸಿಕ್ಕಿದೆ. ಇದರಲ್ಲಿ 5400 ಶಿಕ್ಷಕರನ್ನ ಹೈದ್ರಾಬಾದ್‌ ಕರ್ನಾಟಕಕ್ಕೆ ನೇಮಿಸಿಕೊಳ್ಳಲಾಗುವುದು. ಉಳಿದ 4600 ಹುದ್ದೆಗಳನ್ನು ರಾಜ್ಯದ ಇತರೆ ಜಿಲ್ಲೆಗಳಿಗೆ ಮೀಸಲಿಡಲಾಗುವುದು ಎಂದು ತಿಳಿಸಿದರು.

--

Follow Us:
Download App:
  • android
  • ios