ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯು ಮೇ 13ಕ್ಕೆ ಪೂರ್ಣಗೊಳ್ಳಲಿದೆಯಾದರೂ, ಏಪ್ರಿಲ್ ತಿಂಗಳಲ್ಲೇ ರಾಜ್ಯದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಚುನಾವಣೆಗೆ ಮುನ್ನವೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯಗೊಳಿಸುವುದು ಅನಿವಾರ್ಯವೆನ್ನಲಾಗಿದೆ.
ಬೆಂಗಳೂರು(ಅ. 11): ರಾಜ್ಯದ ಹತ್ತನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ಇದೆ. ಮಾರ್ಚ್-ಏಪ್ರಿಲ್'ನಲ್ಲಿ ನಡೆಯಬೇಕಿದ್ದ ಎಸ್ಸೆಸೆಲ್ಸಿ ಪರೀಕ್ಷೆಗಳು ಮಾರ್ಚ್'ನಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಅವಧಿಗೂ ಮುನ್ನವೇ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆದಿರುವುದು ಮೂಲಗಳಿಂದ ಸುವರ್ಣನ್ಯೂಸ್'ಗೆ ಮಾಹಿತಿ ಲಭಿಸಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇಂಥದ್ದೊಂದು ನಿರ್ಧಾರಕ್ಕೆ ಬರುತ್ತಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯು ಮೇ 13ಕ್ಕೆ ಪೂರ್ಣಗೊಳ್ಳಲಿದೆಯಾದರೂ, ಏಪ್ರಿಲ್ ತಿಂಗಳಲ್ಲೇ ರಾಜ್ಯದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಚುನಾವಣೆಗೆ ಮುನ್ನವೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯಗೊಳಿಸುವುದು ಅನಿವಾರ್ಯವೆನ್ನಲಾಗಿದೆ.
ಆದರೆ, ಪರೀಕ್ಷೆಯ ಫಲಿತಾಂಶವು ನಿಶ್ಚಿತ ದಿನಾಂಕ ಮೇ 12ರಂದೇ ಘೋಷಣೆಯಾಗುವ ನಿರೀಕ್ಷೆ ಇದೆ.