ಸ್ಟಾರ್ ನಿರ್ದೇಶಕನ ವಿರುದ್ಧ ಶ್ರೀರೆಡ್ಡಿ ಬಾಂಬ್

SriReddy makes sexual exploitation allegation against AR Murugadoss
Highlights

  • ನಮ್ಮಿಬ್ಬರ ನಡುವೆ ಜಾಸ್ತಿ ---' ಎಂದು ಪದವನ್ನು ಅರ್ಧಕ್ಕೆ ಬಿಟ್ಟಿರುವುದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ
  • ಇತ್ತೀಚಿಗಷ್ಟೆ ಅರೆಬೆತ್ತಲೆ ಪ್ರತಿಭಟನೆ, ನಟನ ಸಹೋದರನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು 

ಹೈದರಾಬಾದ್(ಜು.12): ವಿವಾದಗಳಲ್ಲೇ ಹೆಚ್ಚು ಖ್ಯಾತಿ ಗಳಿಸಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಈಗ ತಮ್ಮ ತಮಿಳು ನಿರ್ದೇಶಕ ಎ.ಆರ್.ಮುರುಗದಾಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ.

ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು,  ಹಿಂದೆ ನಡೆದಿರುವ ಘಟನೆಯನ್ನು ವಿವರಿಸಿದ್ದು ನಮಸ್ಕಾರ ತಮಿಳು ಡೈರೆಕ್ಟರ್  ಮುರುಗದಾಸ್ ಜೀ.... ಹೇಗಿದ್ದೀರಾ ?  ಗ್ರೀನ್ ಪಾರ್ಕ್ ಹೋಟೆಲ್ ನಿಮಗೆ ನೆನಪಿದೆಯಾ.?  ವೇಲಗೊಂಡ ಶ್ರೀನಿವಾಸ್ ಅವರ ಮೂಲಕ ನಾವು ಭೇಟಿ ಮಾಡಿದ್ದೆವು. ನೀವು ನನಗೆ  ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ಆದರೆ, ನಮ್ಮಿಬ್ಬರ ನಡುವೆ ಜಾಸ್ತಿ......... ಎಂದು ಮಾತನ್ನು ಸಾಲನ್ನು ನಿಲ್ಲಿಸಿ  ಇದುವರೆಗೂ ನೀವು ನನಗೆ ಯಾವುದೇ ಆಫರ್ ಮಾಡಲಿಲ್ಲ.'' ಎಂದು ಬರೆದುಕೊಂಡಿದ್ದಾರೆ.  

ಮಧ್ಯದಲ್ಲಿ 'ನಮ್ಮಿಬ್ಬರ ನಡುವೆ ಜಾಸ್ತಿ ---' ಪದವನ್ನು ಅರ್ಧದಲ್ಲೇ ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊನೆಯದಾಗಿ 'ನೀವು ಕೂಡ ಗ್ರೇಟ್ ಪರ್ಸನ್  ಸರ್' ಎಂದು ತಮ್ಮ ಮಾತನ್ನು ಮುಗಿಸಿದ್ದಾರೆ. ಕೆಲವು ತಿಂಗಳ ಹಿಂದೆ ತೆಲುಗು ಚಿತ್ರೋದ್ಯಮದ ಮುಂದೆ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ನಡದು ಕೆಲವು ದಿನಗಳ ನಂತರ ನಟ ರಾಣ ದಗ್ಗುಬಟ್ಟಿ ಅವರ ಸಹೋದರ ರಾಣ ಅಭಿಷೇಕ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು.  ತಮಿಳಿನ ಖ್ಯಾತ ನಿರ್ದೇಶಕರಾಗಿರುವ ಮುರುಗದಾಸ್ ಘಜನಿ,ಸ್ಟಾಲಿನ್, ಕತ್ತಿ, ತುಪಾಕಿ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  

 

loader