ಎಚ್‌​ಡಿಕೆ ಸರ್ಕಾರ ಹೆಚ್ಚು ದಿನ ಉಳಿ​ಯ​ಲ್ಲ: ಶ್ರೀರಾ​ಮು​ಲು

Sriramulu Slams CM HD Kumaraswamy
Highlights

ಜನಾಶೀರ್ವಾದವಿಲ್ಲದಿದ್ದರೂ ಅಧಿಕಾರಕ್ಕೇರಿರುವ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರದಲ್ಲಿ ಈಗಾಗಲೇ ಸಚಿವ ಸ್ಥಾನಕ್ಕಾಗಿ ತಿಕ್ಕಾಟ ನಡೆದಿದ್ದು, ಈ ಸರ್ಕಾರ ಹೆಚ್ಚು ದಿನ ಉಳಿಯುವು​ದಿಲ್ಲ ಎಂದು ಶಾಸಕ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
 

ಕೊಪ್ಪಳ :  ಜನಾಶೀರ್ವಾದವಿಲ್ಲದಿದ್ದರೂ ಅಧಿಕಾರಕ್ಕೇರಿರುವ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರದಲ್ಲಿ ಈಗಾಗಲೇ ಸಚಿವ ಸ್ಥಾನಕ್ಕಾಗಿ ತಿಕ್ಕಾಟ ನಡೆದಿದ್ದು, ಈ ಸರ್ಕಾರ ಹೆಚ್ಚು ದಿನ ಉಳಿಯುವು​ದಿಲ್ಲ ಎಂದು ಶಾಸಕ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನತೆ ಬಿಜೆಪಿಗೆ ಆಶೀರ್ವಾದ ನೀಡಿದ್ದಾರೆ. ಆದರೆ, ಕೇವಲ 38 ಸ್ಥಾನ ಗೆದ್ದಿರುವ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಜತೆಗೆ ಕೈ ಜೋಡಿಸಿ ಅಧಿಕಾರ ಹಿಡಿದಿದೆ. ಆದರೆ, ಇದು ಹೆಚ್ಚು ದಿನ ನಡೆ​ಯು​ವು​ದಿ​ಲ್ಲ. ರಾಜ್ಯದ ಜನತೆ ಬೇಸರಗೊಂಡಿದ್ದು, ಮತ್ತೆ ವಿಧಾನಸಭಾ ಚುನಾವಣೆ ನಡೆದರೂ ನಡೆಯಬಹುದು. ಒಂದು ವೇಳೆ ಚುನಾವಣೆ ನಡೆದರೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು, ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬರುವ ಮುನ್ನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಕುರಿತು ತಿಳಿಸಿದ್ದರು. ಆದರೆ, ಮುಖ್ಯಮಂತ್ರಿಯಾದ ಬಳಿಕ ಸಾಲ ಮನ್ನಾದ ವಿಷಯದಲ್ಲಿ ಮಾತು ತಪ್ಪಿದ್ದಾರೆ. ಹೇಳಿಕೊಂಡಂತೆ ನಡೆದಿಲ್ಲ ಎಂದು ಆರೋಪಿಸಿದರು.

loader