ಕಳೆದ ಡಿಸೆಂಬರ್ 24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದ್ದರು. ಇದೀಗ ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಭೀಮ ಬಲ ಬಂದಂತಾಗಿದ್ದು, ಈ  ಚುನಾವಣೆಯಲ್ಲಿ ಅಭ್ಯರ್ಥಿಯೇ ಇಲ್ಲದ ಕಾಂಗ್ರೆಸ್​ನ ಬಣ್ಣ ಬಯಲಾಗಲಿದೆ ಅಂತ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಹೊರಬಂದ ಶ್ರೀನಿವಾಸ ಪ್ರಸಾದ್, ಇವತ್ತು ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಶ್ರೀನಿವಾಸ ಪ್ರಸಾದ್​ ಬಿಜೆಪಿ ಸೇರ್ಪಡೆಯಿಂದ, ಕಮಲ ಪಕ್ಷಕ್ಕೆ ಆಗಲಿರುವ ಲಾಭನಷ್ಟದ ಲೆಕ್ಕಾಚಾರವೇನು? ಈ ಮೂಲಕ ಶ್ರೀನಿವಾಸ ಪ್ರಸಾದ್ ಪಡೆಯುತ್ತಿರುವುದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ .

ಕಳೆದ ಡಿಸೆಂಬರ್ 24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದ್ದರು. ಇದೀಗ ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಭೀಮ ಬಲ ಬಂದಂತಾಗಿದ್ದು, ಈ ಚುನಾವಣೆಯಲ್ಲಿ ಅಭ್ಯರ್ಥಿಯೇ ಇಲ್ಲದ ಕಾಂಗ್ರೆಸ್​ನ ಬಣ್ಣ ಬಯಲಾಗಲಿದೆ ಅಂತ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಯ ಲೆಕ್ಕಚಾರ ಅಡಗಿದೆ. ಪ್ರಸಾದ್ ಸೇರ್ಪಡೆಯಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಗೆ ಆನೆಬಲ ಬಂದಂತಾಗಲಿದೆ. ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಇಪ್ಪತ್ತೆಂಟು ಸಾವಿರ ಮುನ್ನೂರ ಹನ್ನೆರಡು ಮತಗಳ ಪಡೆದಿದ್ರು. ಆಗ ಇಲ್ಲಿ ಬಿಜೆಪಿಗೆ ಬಿದ್ದದ್ದು ಏಳು ಸಾವಿರದ ಎಪ್ಪತ್ನಾಲ್ಕು ಮತಗಳು. ಈಗ ಶ್ರೀನಿವಾಸ ಪ್ರಸಾದರಿಗೆ ಹೆಚ್ಚು ಮತ ಲಭ್ಯವಾಗುವುದರಲ್ಲಿ ಅನುಮಾನಗಳಿಲ್ಲ. ಈ ಎಲ್ಲ ಲೆಕ್ಕಾಚಾರಗಳೊಂದಿಗೇ ಪ್ರಸಾದ್​ ಕಮಲದ ತೆಕ್ಕೆ ಸೇರುತ್ತಿದ್ದಾರೆ.

ಒಟ್ಟಿನಲ್ಲಿ ನಂಜನಗೂಡಿನ ರಾಜಕೀಯ ಕೆಸರಿನಲ್ಲಿ ಕಮಲ ಅರಳಿಸುವ ಸೂರ್ಯನಾಗಿ ಶ್ರೀನಿವಾಸ ಪ್ರಸಾದ್​ ಹೊರಹೊಮ್ಮುತ್ತಾರಾ ಅನ್ನೋದಕ್ಕೆ ಉತ್ತರ ಸಿಗಲು ಹೆಚ್ಚು ಕಾಲ ದೂರವಿಲ್ಲ.

ವರದಿ: ವೀರೇಂದ್ರ ಉಪ್ಪುಂದ., ಪೊಲಿಟಿಕಲ್ ಬ್ಯೂರೋ, ಸುವರ್ಣನ್ಯೂಸ್​.