ಶ್ರೀಲಂಕಾ ಮಾಜಿ ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ್ದಾರೆ. ನಿನ್ನೆ ತಿರುಪತಿ ತಿರುಮಲ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಇಂದು ಬೆಳಿಗ್ಗೆ ದೇವರ ದರ್ಶನ ಪಡೆದು ಬೆಂಗಳೂರಿಗೆ ಆಗಮಿಸಿದರು.
ದೇವನಹಳ್ಳಿ (ಏ. 27): ಶ್ರೀಲಂಕಾ ಮಾಜಿ ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ್ದಾರೆ. ನಿನ್ನೆ ತಿರುಪತಿ ತಿರುಮಲ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಇಂದು ಬೆಳಿಗ್ಗೆ ದೇವರ ದರ್ಶನ ಪಡೆದು ಬೆಂಗಳೂರಿಗೆ ಆಗಮಿಸಿದರು.
ಮಾಧ್ಯಮಗಳೊಂದಿಗೆ ಮಾತಾನಾಡುತ್ತ, ಭಾರತ ಸರ್ಕಾರ ಶ್ರೀಲಂಕಾ ಬೆಳವಣಿಗೆಗೆ ಹೆಚ್ಚು ಸಹಕಾರ ನೀಡುತ್ತಿವುದಕ್ಕೆ ಕೃತಜ್ಞತೆಗಳನ್ನು ತಿಳಿಸಿದರು. ಶ್ರೀಲಂಕಾ ಚೀನಾದತ್ತ ಹೆಚ್ಚು ಒಲವು ತೋರಲು ಕಾರವೇನು ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಪಕ್ಸೆ, ಶ್ರೀಲಂಕಾದಲ್ಲಿ ಯುದ್ದ ನಂತರ ಆಗಿನ ಭಾರತ ಸರ್ಕಾರ ಪುನರ್ ನಿರ್ಮಾಣಕ್ಕೆ ಅದ್ಯಾಕೋ ಒಲವು ತೋರಲಿಲ್ಲ. ಆಗ ಚೀನಾ ಸ್ವಯಂಪ್ರೇರಿತವಾಗಿ ಮುಂದೆ ಬಂದು ಸಹಕಾರ ನೀಡಿತು. ಹಾಗಾಗೀ ಸ್ವಲ್ಪ ಒಲವು ಚೀನಾದತ್ತ ಒಲವು ತೋರಿತೆಂದರು.
ಶ್ರೀಲಂಕಾದಲ್ಲಿ ಪ್ರಸ್ತುತ ಸರ್ಕಾರ ಪ್ರಮುಖ ವಾಣಿಜ್ಯ ಬಂದರೊಂದನ್ನು ಚೀನಾ ಸರ್ಕಾರಕ್ಕೆ ಮಾರಾಟ ಮಾಡಿರುವುದನ್ನು ಖಂಡಿಸಿದರು. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಮಹೇಂದ್ರ ರಾಜಪಕ್ಸೆ ಪಕ್ಷ ಶೇಕಡ 85 ಸ್ಥಾನಗಳನ್ನು ಪಡೆದುಕೊಂಡಿದೆ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆಯೆಂದು ಭವಿಷ್ಯ ನುಡಿದರು.
ಈಗಿನ ಭಾರತ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆಂದು ರಾಜಪಕ್ಷೆ ಹೇಳಿದ್ದಾರೆ.

Last Updated 27, Apr 2018, 4:20 PM IST