ನಟಿ  ಶ್ರೀದೇವಿ ಅವರು ಮೊದಲಿಗೆ 1980 ರಲ್ಲಿ  ಮಿಥುನ್‌ ಚಕ್ರವರ್ತಿ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು ಎಂಬ ಸುದ್ದಿ ಹರಡಿತ್ತು. 

ಮುಂಬೈ (ಫೆ.25): ನಟಿಶ್ರೀದೇವಿ ಅವರು ಮೊದಲಿಗೆ 1980 ರಲ್ಲಿ ಮಿಥುನ್‌ ಚಕ್ರವರ್ತಿ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು ಎಂಬ ಸುದ್ದಿ ಹರಡಿತ್ತು. 

ಈ ವಿಚಾರ ಫ್ಯಾನ್ ನಿಯತಕಾಲಿಕೆಯಲ್ಲಿ ಇವರ ಮ್ಯಾರೇಜ್ ಸರ್ಟಿಫಿಕೇಟ್ ಪ್ರಕಟವಾದ ನಂತರ ಮಿಥುನ್ ತಾವು ವಿವಾಹವಾಗಿರುವುದನ್ನು ಒಪ್ಪಿಕೊಂಡಿದ್ದರು. ಈ ವಿಷಯ ಮಿಥುನ್ ಪತ್ನಿ ಯೋಗಿತಾ ಬಾಲಿಗೆ ಗೊತ್ತಾದ ಬಳಿಕ ಮಿಥುನ್ ಮತ್ತೆ ತಮ್ಮ ಪತ್ನಿಯತ್ತ ವಾಪಸಾಗಿದ್ದರು. ಆ ನಂತರ ಮಿಥುನ್ ಚಕ್ರವರ್ತಿ- ಶ್ರೀದೇವಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. 1996 ರಲ್ಲಿ ಶ್ರೀದೇವಿ ಅವರು ನಿರ್ಮಾಪಕ ಬೋನಿ ಕಪೂರ್‌ ಅವರನ್ನು ಮದುವೆಯಾದರು. ಈ ದಂಪತಿಗೆ ಜಾನ್ವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ನಟರಾದ ಅನಿಲ್‌ ಕಪೂರ್‌ ಮತ್ತು ಸಂಜಯ್‌ ಕಪೂರ್‌ ಬೋನಿ ಕಪೂರ್‌ ಅವರ ಬೋನಿ ಕಪೂರ್‌ ಅವರ ಸೋದರರು. ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ.