ನವದೆಹಲಿ(ನ.20): ಜಾಗತಿಕ ಶಾಂತಿ ಪ್ರತಿಪಾದಕರಾದ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಇಂದು ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹಸಚಿವ ರಾಜ್'ನಾಥ್ ಸಿಂಗ್ 'ಡಾ. ನಾಗೇಂದ್ರ ಸಿಂಗ್ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿ'ಯನ್ನು ಆಧ್ಯಾತ್ಮ ಗುರುವಿಗೆ ನೀಡಿ ಗೌರವಿಸಿದ್ದಾರೆ.

ಆರ್ಟ್ ಆಫ್ ಲಿವಿಂಗ್ ಮೂಲಕ ಜಾಗತಿಕ ಶಾಂತಿ ಸಂದೇಶ ನೀಡುತ್ತಿರುವ ಗುರೂಜಿ ಅವರ ಸೇವೆಯನ್ನು ಗುರುತಿಸಿ ಈ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾ

ಅಂತರಾಷ್ಟ್ರೀಯ ನಾಯಾಲಯದಲ್ಲಿ ಭಾರತದ ಮೊದಲ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಡಾ. ನಾಗೇಂದ್ರ ಸಿಂಗ್ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.