Asianet Suvarna News Asianet Suvarna News

ಯಮುನಾ ನದಿಯ ಪರಿಸರ ಹಾನಿಗೆ ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಕಾರಣ

ನ್ಯಾಯ ಮಂಡಳಿ ಈಗಾಗಲೇ ಪರಿಸರ ಹಾನಿಯ ನಷ್ಟಕ್ಕೆ 5 ಕೋಟಿ ರೂ. ದಂಡ ವಿಧಿಸಿ ಆ ಹಣವನ್ನು ಪುನರುಜ್ಜೀವನ ಉದ್ದೇಶಗಳಿಗೆ ಬಳಸುವಂತೆ ತಿಳಿಸಿದೆ.

Sri Sri Ravi Shankars Art Of Living Blamed For Damage To Yamuna Floodplains By Green Court

ನವದೆಹಲಿ(ಡಿ.07): ಯಮುನಾ ನದಿಯಲ್ಲಿ ಆದ ಪರಿಸರ ಹಾನಿಗೆ ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಕಳೆದ ವರ್ಷ 3 ದಿನಗಳ ಕಾಲ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಸಮ್ಮೇಳನವೆ ಕಾರಣ ಎಂದು ಹಸಿರು ನ್ಯಾಯ ಮಂಡಳಿ ತಿಳಿಸಿದೆ.

ಪರಿಸರ ಹಾನಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಹೊಣೆ ಹೊತ್ತು ಪುನರ್ ನಿರ್ಮಾಣ ಕಾರ್ಯಗಳನ್ನು ನಿರ್ವಹಿಸಬೇಕು ಎಂದು  ಹಸಿರು ನ್ಯಾಯ ಮಂಡಳಿಯ ಮುಖ್ಯಸ್ಥರಾದ ಸ್ವತಂತ್ರ ಕುಮಾರ್ ಆದೇಶಿಸಿದೆ.

ನ್ಯಾಯ ಮಂಡಳಿ ಈಗಾಗಲೇ ಪರಿಸರ ಹಾನಿಯ ನಷ್ಟಕ್ಕೆ 5 ಕೋಟಿ ರೂ. ದಂಡ ವಿಧಿಸಿ ಆ ಹಣವನ್ನು ಪುನರುಜ್ಜೀವನ ಉದ್ದೇಶಗಳಿಗೆ ಬಳಸುವಂತೆ ತಿಳಿಸಿದೆ. ಒಂದು ವೇಳೆ ಹೆಚ್ಚು ಹಣದ ಅವಶ್ಯಕತೆಯಿದ್ದರೆ ಆರ್ಟ್ ಆಫ್ ಲಿವಿಂಗ್ ಪಾವತಿಸಬೇಕು.ಈಗಾಗಲೇ ಠೇವಣಿಯಿಟ್ಟಿರುವ 5 ಕೋಟಿ ಹಣವನ್ನು ಪುನಃ ಮರಳಿಸಲಾಗುವುದಿಲ್ಲ' ಎಂದು ಮಂಡಳಿಯ ಮುಖ್ಯಸ್ಥರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಪ್ರಮುಖ ಯೋಜನಾ ಸಂಸ್ಥೆಯಾದ ದೆಹಲಿ ಅಭಿವೃದ್ಧಿ ಮಂಡಳಿಗೆ ಹಾನಿಯ ಪುನರ್'ನಿರ್ಮಾಣಕ್ಕೆ ಎಷ್ಟು ಹಣ ವ್ಯಯವಾಗುವುದರ ಬಗ್ಗೆ ನೂತನ ವರದಿ ತಯಾರಿಸಲು ಸೂಚನೆ ನೀಡಿದೆ

Follow Us:
Download App:
  • android
  • ios