ಮುಖ್ಯಮಂತ್ರಿ ಯೋಗಿ ಮಸೀದಿ ಮೈಕ್ ಕೆಳಗಿಳಿಸ್ತಾರೆ ಅಂದ್ರೆ ಕರ್ನಾಟಕದ ಕಾನೂನು ಪಾಲಕರು ನೀವೇನ್ ಮಾಡ್ತಾ ಇದೀರಿ ಇಲ್ಲಿಯ ತನಕ ಹೋರಾಟ, ಮನವಿ, ದೂರು ಎಲ್ಲವೂ ಆಯ್ತು. ಆದ್ರೆ ನೋಟೀಸ್ ಕೊಡೋ ನಾಟಕ ಮಾಡಿ ನಿಲ್ಲಿಸಲಾಗಿದೆ. ಹೀಗಾಗಿ ಮೇ.9ರಿಂದ ಒಂದು ಸಾವಿರ ದೇವಸ್ಥಾನ ಮತ್ತು ಮಠಗಳಲ್ಲಿ ನಡೆಯಲಿದೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. 

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು: ಆಜಾನ್ ಮೈಕ್ ಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೀಡಿದ್ದ ಗಡುವು ಮುಕ್ತಾಯವಾಗಿದ್ದು, ಮೇ.9ರಿಂದ ರಾಜ್ಯದ ಸಾವಿರಕ್ಕೂ ಅಧಿಕ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಆಜಾನ್ ವಿರುದ್ದ ಸುಪ್ರಭಾತ, ಮಂತ್ರಘೋಷ ಮೊಳಗಿಸಲಾಗುವುದು. ಇದನ್ನು ಸರ್ಕಾರ ತಡೆಯಲು ‌ಮುಂದಾದರೆ ಸಂಘರ್ಷ ನಡೆಯಲಿದೆ ಎಂದು ಪ್ರಮೋದ್ ‌ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಕಾನೂನು ಉತ್ತರ ಪ್ರದೇಶ ಮತ್ತು ಕರ್ನಾಟಕ್ಕೆ ಒಂದೇ. ಮುಖ್ಯಮಂತ್ರಿ ಯೋಗಿ ಮಸೀದಿ ಮೈಕ್ ಕೆಳಗಿಳಿಸ್ತಾರೆ ಅಂದ್ರೆ ಕರ್ನಾಟಕದ ಕಾನೂನು ಪಾಲಕರು ನೀವೇನ್ ಮಾಡ್ತಾ ಇದೀರಿ ಇಲ್ಲಿಯ ತನಕ ಹೋರಾಟ, ಮನವಿ, ದೂರು ಎಲ್ಲವೂ ಆಯ್ತು. ಆದ್ರೆ ನೋಟೀಸ್ ಕೊಡೋ ನಾಟಕ ಮಾಡಿ ನಿಲ್ಲಿಸಲಾಗಿದೆ. ಹೀಗಾಗಿ ಮೇ.9ರಿಂದ ಒಂದು ಸಾವಿರ ದೇವಸ್ಥಾನ ಮತ್ತು ಮಠಗಳಲ್ಲಿ ನಡೆಯಲಿದೆ. ಬೆ.5ಗಂಟೆಗೆ ಪ್ರಾರ್ಥನೆ, ಸುಪ್ರಭಾತ ಮತ್ತು ಓಂಕಾರ ಹಾಕ್ತೇವೆ‌. ಇದು ಸರ್ಕಾರ ಮತ್ತು‌ ಮುಸ್ಲಿಂ ಸಮಾಜದ ವಿರುದ್ದ ನಮ್ಮ ಹೋರಾಟ. ಮುಸ್ಲಿಂ ಸಮಾಜದ ಉದ್ದಟತನ ಮತ್ತು ಸೊಕ್ಕಿನ ವರ್ತನೆ ಸರಿಯಲ್ಲ. ಅಜಾನ್, ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ, ಶಬ್ದಕ್ಕೆ ನಮ್ಮ ವಿರೋಧ. ಸದ್ಯ ನಮಗೂ ಕಾನೂನು ಉಲ್ಲಂಘನೆ ಒಂದೇ ಉಳಿದಿರೋ ದಾರಿ. ನಮ್ಮ ಪ್ರಾರ್ಥನೆಗೆ ಅಡ್ಡಿ ಪಡಿಸಿದ್ರೆ ಸಂಘರ್ಷ ನಡೆಯುತ್ತದೆ. ನಮ್ಮ ಮೇಲೆ ಕೇಸ್ ಹಾಕುವ ಮೊದಲು ಮುಸ್ಲಿಮ್ ಸಮಾಜದ ಮೇಲೆ ಕೇಸ್ ಹಾಕಿ. ಮೊದಲು ಮುಸ್ಲಿಮರ ಮೈಕ್ ಇಳಿಸಿ ನಮ್ಮ ದೇವಸ್ಥಾನಕ್ಕೆ ಬನ್ನಿ ಅಂತ ಸರ್ಕಾರಕ್ಕೆ ಹೇಳ್ತೇನೆ‌. ಸಂಘರ್ಷ ಮತ್ತು ಗದ್ದಲಕ್ಕೆ ಎಡೆ ಮಾಡಿ ಕೊಡಬೇಡಿ ಅಂತ ಎಚ್ಚರಿಸ್ತೇನೆ. ಸರ್ಕಾರ ನ್ಯಾಯಾಂಗ ನಿಂದನೆಗೆ ಹೆದರಿ ನೋಟೀಸ್ ಕೊಟ್ಟಿದ್ದಾರೆ, ಇದು ತೋರಿಕೆಕೆ. ಬರೇ ನೋಟೀಸ್ ಕೊಟ್ರೆ ಆಗಲ್ಲ, ಮೈಕ್ ಇಳಿಸಿದ ಬಗ್ಗೆ ನಮಗೆ ಹೇಳಿ. ನಮಗೆ ಕ್ರಮ ತೆಗೊಳೋದಾದ್ರೆ ನಾವು ಕೂಡ ಕೋರ್ಟ್ ಗೆ ಹೋಗ್ತೇವೆ. ಇವರು ಮುಸ್ಲಿಮರಿಗೆ ಹೆದರ್ತಾ ಇದಾರೆ, ಜಾತ್ಯಾತೀತ ಮತ್ತು ಮುಸ್ಲಿಂ ಓಟ್ ಗಳ ಹಿನ್ನೆಲೆಯಲ್ಲಿ ಮಾಡ್ತಿದಾರೆ. ನಮ್ಮ ಹೋರಾಟಕ್ಕೆ ಕರ್ನಾಟಕದ ಮಠಾಧೀಪತಿಗಳು, ದೇವಸ್ಥಾನದ ಧರ್ಮದರ್ಶಿಗಳ ಬೆಂಬಲ ಇದೆ. ಜೊತೆಗೆ ಅರ್ ಎಸ್ ಎಸ್, ವಿಎಚ್ ಪಿ, ಭಜರಂಗದಳ, ಹಿಂಜಾವೇ ಎಲ್ಲವೂ ನಮಗೆ ಬೆಂಬಲ ಕೊಟ್ಟಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಇದನ್ನೂ ಓದಿ: Ramadan Festival ಭರ್ಜರಿ ವ್ಯಾಪಾರ ಕಾಣ್ತಿರೋ ಭಟ್ಕಳದ ರಂಜಾನ್ ಮಾರ್ಕೆಟ್

ಅಕ್ಷಯ ತೃತೀಯ ದಿನ ಮುಸ್ಲಿಮರ ಮಳಿಗೆಗಳ ವಿರುದ್ದ ಮುತಾಲಿಕ್ ವಾರ್!:

ಮುಸ್ಲಿಂ ಮಾಲಕತ್ವದ ಚಿನ್ನದಂಗಡಿ ಬಹಿಷ್ಕಾರಿಸಲು ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಹಿಳೆಯರನ್ನು ಭೇಟಿಯಾಗಿ ಮನವಿ ಮಾಡಿದ ಮುತಾಲಿಕ್, ದುರ್ಗಾಸೇನೆ ಮೂಲಕ ಮಂಗಳೂರಿನಲ್ಲಿ ಅಭಿಯಾನ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಮುಸ್ಲಿಮರ ಚಿನ್ನದಂಗಡಿಯಲ್ಲಿ ಖರೀದಿಸಬೇಡಿ. ಹಿಂದೂ ಅಂಗಡಿಗಳಲ್ಲೇ ಅಕ್ಷಯ ತೃತೀಯ ಚಿನ್ನ ಖರೀದಿಗೆ ಮುತಾಲಿಕ್ ಮನವಿ ಮಾಡಿದ್ದಾರೆ. ಮಂಗಳೂರು ಪಂಪ್ ವೆಲ್ ಬಳಿಯ ಮಹಿಳಾ ಹಾಸ್ಟೆಲ್ ಗೆ ಭೇಟಿ ನೀಡಿದ ಅವರು ನಾಳೆ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಿದ್ದಾರೆ. ದುಬೈನ ಅಕ್ರಮ ಚಿನ್ನವನ್ನ ಕೇರಳಕ್ಕೆ ಸಾಗಿಸಿ ಗೋಲ್ಡ್ ಸ್ಮಗ್ಲಿಂಗ್ ದಂಧೆ ಮಾಡಲಾಗ್ತಿದೆ. ಅಲ್ಲಿಂದ ಮುಸ್ಲಿಂ ಮಾಲಕತ್ವದ ಅಂಗಡಿಗಳಲ್ಲಿ ಮಾರಾಟ ಮಾಡಿ ಬಂದ ಹಣ ದೇಶದ್ರೋಹಿ ಕೃತ್ಯಕ್ಕೆ ಬಳಕೆಯಾಗ್ತಿದೆ. ಗೋ ಕಳವು, ಗಲಭೆ ಸೇರಿ ಮುಸ್ಲಿಮ್ ಗೂಂಡಾಗಳಿಗೆ ಬಳಕೆ ಮಾಡ್ತಿರೋ ಕಾರಣದಿಂದ ಮುಸ್ಲಿಮರ ಚಿನ್ನದ ಅಂಗಡಿಗಳನ್ನ ಬಹಿಷ್ಕರಿಸಲು ಮುತಾಲಿಕ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Ramadan Leave ರಂಜಾನ್ ಹಬ್ಬದ ರಜೆ ಬದಲಾವಣೆ, ಮೇ 3ರ ಬದಲು ಮೇ 2ಕ್ಕೆ ಸಾರ್ವತ್ರಿಕ ರಜೆ ಘೋಷಣೆ!

'ಮುತಾಲಿಕ್ ಗೆ ಬಿಜೆಪಿ ಯಾವತ್ತಿಗೂ ಟಿಕೆಟ್ ಕೊಡಲ್ಲ':

ಮಂಗಳೂರಿನಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ಹೋರಾಟಗಾರರಿಗೆ, ಪ್ರಾಮಾಣಿಕರಿಗೆ ಬಿಜೆಪಿ ಟಿಕೆಟ್ ಕೊಡಲ್ಲ. ನಾನು ರಾಜಕೀಯದ ಬಾಗಿಲು ಮುಚ್ಚಿದ್ದೇನೆ, ಬರೇ ಹಿಂದುತ್ವದ ವಿಚಾರದಲ್ಲಿ ಹೋರಾಟ. ನಮ್ಮ ಹೋರಾಟ ಮತ್ತು ರಾಜಕೀಯಕ್ಕೆ ಯಾವುದೇ ಸಂಬಂಧ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಬಹಳ ಕ್ಲಿಯರ್ ಆಗಿ ಹೇಳಿದ್ದಾರೆ.‌ ಶ್ರೀರಾಮ ಸೇನೆ ಮತ್ತು ಬಿಜೆಪಿಗೆ ಸಂಬಂಧ ಇಲ್ಲ ಅಂತ ಹೇಳಿದ್ದಾರೆ. ಹೀಗಾಗಿ ‌ನನ್ನ ಹೋರಾಟದಲ್ಲಿ ರಾಜಕೀಯದ ಪ್ರಶ್ನೆ ಬರಲ್ಲ. ಬೇರೆ ಪಕ್ಷ ಪ್ರಮೋದ್ ಮುತಾಲಿಕ್ ನ ಹತ್ತಿರವೂ ಸೇರಿಸಲ್ಲ. ಕಾಂಗ್ರೆಸ್, ಸಿದ್ದರಾಮಯ್ಯ, ಜೆಡಿಎಸ್, ಕಮ್ಯುನಿಸ್ಟ್ ಎಲ್ಲರೂ ನನ್ನಿಂದ ದೂರ. ಮುತಾಲಿಕ್ ಹಿಂದುತ್ವದ ವಿಚಾರದಲ್ಲಿ ಯಾರ ಜೊತೆಗೂ ಕಾಂಪ್ರಮೈಸ್ ಆಗಲ್ಲ. ಹಿಂದುತ್ವಕ್ಕಾಗಿ ರಾಜಕೀಯ ಮಾಡಿ ನಾನು ವಿಫಲನಾದೆ.‌ನಾನು ರಾಜಕೀಯದಲ್ಲಿ ಝೀರೋ, ಹಿಂದುತ್ವ ದಲ್ಲಿ ಹೀರೋ ಎಂದರು.

YouTube video player