Asianet Suvarna News Asianet Suvarna News

ಉಗ್ರ ದಾಳಿ ತಡೆಗಟ್ಟುವಲ್ಲಿ ವಿಫಲ: ಪೊಲೀಸ್ ಮುಖ್ಯಸ್ಥನ ಬಂಧನ!

ಉಗ್ರ ದಾಳಿ ತಡೆಯುವಲ್ಲಿ ವಿಫಲ ಆರೋಪ| ಪೊಲೀಸ್ ಮುಖ್ಯಸ್ಥನನ್ನೇ ಬಂಧಿಸಿದ ಸರ್ಕಾರ| ಶ್ರೀಲಂಕಾ ಈಸ್ಟರ್ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣ| ಶ್ರೀಲಂಕಾ ಮಾಜಿ ಪೊಲೀಸ್ ಮುಖ್ಯುಸ್ಥ ಪುಜಿತ್ ಜಯಸುಂದರ್ ಬಂಧನ| ಮಾಜಿ ರಕ್ಷಣಾ ಕಾರ್ಯದರ್ಶಿ ಹೆಮಸಿರಿ ಫರ್ನಾಂಡೋ ಬಂಧನ| ಅಟಾರ್ನಿ ಜನರಲ್ ಆದೇಶದ ಮೇರೆಗೆ ಇಬ್ಬರನ್ನೂ ಬಂಧಿಸಿದ ಶ್ರೀಲಂಕಾ ಪೊಲೀಸರು|  

Sri Lanka Police Chief Arrested Alleged Failure To Prevent Terror Attack
Author
Bengaluru, First Published Jul 2, 2019, 8:21 PM IST

ಕೊಲಂಬೋ(ಜು.02): ಮಹತ್ವದ ಬೆಳವಣಿಗೆಯೊಂದರಲ್ಲಿ ಶ್ರೀಲಂಕಾದ ಈಸ್ಟರ್ ಆತ್ಮಹತ್ಯಾ ಬಾಂಬ್ ದಾಳಿ ತಡೆಗಟ್ಟುವಲ್ಲಿ ವಿಫಲವಾದ ಆರೋಪದ ಮೇಲೆ, ಶ್ರೀಲಂಕಾದ ಮಾಜಿ ಪೊಲೀಸ್ ಮುಖ್ಯಸ್ಥರನ್ನೇ ಬಂಧಿಸಲಾಗಿದೆ.

ಈಸ್ಟರ್ ದಾಳಿಯ ಮುನ್ಸೂಚನೆ ಇದ್ದರೂ ಕ್ರಮ ಕೈಗೊಳ್ಳದ ಆರೋಪದ ಮೇಲೆ ಶ್ರೀಲಂಕಾ ಮಾಜಿ ಪೊಲೀಸ್ ಮುಖ್ಯಸ್ಥ ಪುಜಿತ್ ಜಯಸುಂದರ್ ಹಾಗೂ ಮಾಜಿ ರಕ್ಷಣಾ ಕಾರ್ಯದರ್ಶಿ ಹೆಮಸಿರಿ ಫರ್ನಾಂಡೋ ಅವರನ್ನು ಬಂಧಿಸಲಾಗಿದೆ.

ಈಸ್ಟರ್ ದಾಳಿಯ ಬಳಿಕ ಜಯಸುಂದರ್ ಮತ್ತು ಫರ್ನಾಂಡೋ ಅವರನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸೇವೆಯಿಂದ ಅಮಾನತುಗೊಳಿಸಿದ್ದರು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಟಾರ್ನಿ ಜನರಲ್, ಇವರಿಬ್ಬರ ಕರ್ತವ್ಯಲೋಪ 258 ಜನರನ್ನು ಬಲಿ ಪಡೆದಿದೆ ಎಂದು ಹರಿಹಾಯ್ದರು. ಅಲ್ಲದೇ ರಾಷ್ಟ್ರಕ್ಕೆ ಅಪಾರ ನಷ್ಟ ತಂದಿತ್ತ ಈ ಅಧಿಕಾರಿಗಳನ್ನು ಕೂಡಲೇ ಬಂಧಿಸುವಂತೆ ಆದೇಶ ನೀಡಿದರು.

ಅದರಂತೆ ನ್ಯಾಷನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ನಾಂಡೋ ಹಾಗೂ ಪೊಲೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಸುಂದರ್ ಅವರನ್ನು ಬಂಧಿಸಲಾಗಿದೆ.

Follow Us:
Download App:
  • android
  • ios