ಕೊಲಂಬೋ (ಡಿ. 04): ಪ್ರಧಾನಿ ಹುದ್ದೆಯ ಯಾವುದೇ ಕರ್ತವ್ಯ ನಿರ್ವಹಿಸದಂತೆ ಮಹಿಂದಾ ರಾಜಪಕ್ಸೆ ಅವರಿಗೆ ಶ್ರೀಲಂಕಾ ನ್ಯಾಯಾಲಯವೊಂದು ಸೂಚನೆ ನೀಡಿದೆ.

ಈ ಮೂಲಕ ಮಾಜಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾಗೆ ಮುಖಭಂಗವಾಗಿದೆ.

ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಹಂಗಾಮಿ ಪ್ರಧಾನಿ ರಾಜಪಕ್ಸೆ ಹಾಗೂ ಅವರ ಸರ್ಕಾರದಲ್ಲಿರುವ ಯಾವುದೇ ಸಚಿವರು ತಮ್ಮ ಹುದ್ದೆಯನ್ನು ನಿರ್ವಹಿಸಬಾರದು ಎಂದು ಆದೇಶ ಹೊರಡಿಸಿದೆ. ಅಲ್ಲದೆ, ಈ ಕುರಿತಾದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 12 ಮತ್ತು 13ಕ್ಕೆ ನಿಗದಿಗೊಳಿಸಿದೆ.