45 ವರ್ಷಗಳ ರಾಜಕೀಯ ಜೀವನ ಎಚ್ಚರಿಕೆಯಿಂದ ಕಳೆದಿದ್ದೇನೆ, ಸ್ವಾಭಿಮಾನದ ರಾಜಕಾರಣ‌ ಮಾಡುವುದು ನನ್ನ ಉದ್ದೇಶವಾಗಿದೆ. ಸಿಎಂ ಸಿದ್ದರಾಮಯ್ಯಗೆ ಮೂರು ಪ್ರಶ್ನೆಗಳನ್ನು ಕೇಳಿದ್ದೇನೆ. ಚಾಮುಂಡೇಶ್ವರಿ ಚುನಾವಣೆ ವೇಳೆ ನನ್ನ ಮನೆಬಾಗಿಲಿಗೆ ಬಂದಿದ್ರಿ, ಸೋಲಿನ ಅಂಚಿನಲ್ಲಿದ್ದೇನೆ ಅಂತ ದುಗುಡ ತೋಡಿಕೊಂಡಿದ್ರಿ? ಆಗ ಸಹಾಯ ‌ಮಾಡಿದ್ದು‌ ನಾನಲ್ಲವೇ? ಮಂತ್ರಿ ಮಂಡಲ ಪುನರ್ ರಚನೆ ವೇಳೆ ನನಗ್ಯಾಕೆ ಹೇಳಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯನವರನ್ನ ಶ್ರೀನಿವಾಸ್​ ಪ್ರಸಾದ್​ ಪ್ರಶ್ನಿಸಿದ್ದಾರೆ.

ಬೆಂಗಳೂರು(ಜ.02): ನಾವು ರಾಜಕೀಯ ಶತ್ರುಗಳಲ್ಲ, ರಾಜಕೀಯ ಎದುರಾಳಿಗಳಷ್ಟೇ ಎಂದು ಬಿಜೆಪಿ ಸೇರ್ಪಡೆ ಬಳಿಕ ಶ್ರೀನಿವಾಸ್​ ಪ್ರಸಾದ್​ ಹೇಳಿದ್ದಾರೆ. ಎಲ್ಲ ಬಿಜೆಪಿ‌ ನಾಯಕರೂ‌ ನನಗೆ ಆತ್ಮೀಯರೇ, ಯಾರೊಂದಿಗೂ ನನಗೆ ವೈರತ್ವವಿಲ್ಲ ಎಂದಿದ್ದಾರೆ. ಇದೇವೇಳೆ, ಮಾತನಾಡಿದ ಶ್ರೀನಿವಾಸ ಪ್ರಸಾದ್ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

45 ವರ್ಷಗಳ ರಾಜಕೀಯ ಜೀವನ ಎಚ್ಚರಿಕೆಯಿಂದ ಕಳೆದಿದ್ದೇನೆ, ಸ್ವಾಭಿಮಾನದ ರಾಜಕಾರಣ‌ ಮಾಡುವುದು ನನ್ನ ಉದ್ದೇಶವಾಗಿದೆ. ಸಿಎಂ ಸಿದ್ದರಾಮಯ್ಯಗೆ ಮೂರು ಪ್ರಶ್ನೆಗಳನ್ನು ಕೇಳಿದ್ದೇನೆ. ಚಾಮುಂಡೇಶ್ವರಿ ಚುನಾವಣೆ ವೇಳೆ ನನ್ನ ಮನೆಬಾಗಿಲಿಗೆ ಬಂದಿದ್ರಿ, ಸೋಲಿನ ಅಂಚಿನಲ್ಲಿದ್ದೇನೆ ಅಂತ ದುಗುಡ ತೋಡಿಕೊಂಡಿದ್ರಿ? ಆಗ ಸಹಾಯ ‌ಮಾಡಿದ್ದು‌ ನಾನಲ್ಲವೇ? ಮಂತ್ರಿ ಮಂಡಲ ಪುನರ್ ರಚನೆ ವೇಳೆ ನನಗ್ಯಾಕೆ ಹೇಳಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯನವರನ್ನ ಶ್ರೀನಿವಾಸ್​ ಪ್ರಸಾದ್​ ಪ್ರಶ್ನಿಸಿದ್ದಾರೆ.

ವರುಣಾ ಕ್ಷೇತ್ರ ಸುರಕ್ಷಿತ ಕ್ಷೇತ್ರವೆಂದು ಸಿಎಂಗೆ ಸಲಹೆ ಕೊಟ್ಟಿದ್ದು ನಾನೇ ಎಂಬುದನ್ನ ಸಿದ್ದರಾಮಯ್ಯ ‌ಮರೆತುಬಿಟ್ಟರಾ? ಖರ್ಗೆ ತಮ್ಮ ಮಗ ಸಿಎಂ ಆಗ್ತಾರೆ ಎಂದು ಸುಮ್ಮನಾಗಿಬಿಟ್ಟರಾ? ಈ ಬಗ್ಗೆ ಪರಮೇಶ್ವರ ಕೂಡ ಯಾಕೆ ಸುಮ್ಮನಾದ್ರೂ? ಎಂದು ಸಿಎಂ, ಖರ್ಗೆ ಮತ್ತು ಪರಮೇಶ್ವರ್​ ವಿರುದ್ಧ ಶ್ರೀನಿವಾಸ್​ ಪ್ರಸಾದ್​ ಕಿಡಿ ಕಾರಿದ್ದಾರೆ.