ರಾಜ್ಯದಲ್ಲಿ ತಾಲಿಬಾನಿ-ಕೊಲೆಗಡುಕ ಸರ್ಕಾರ ಆಡಳಿತ : ಶ್ರೀರಾಮುಲು

Sree Ramulu Slams Karnataka Govt
Highlights

ರಾಜ್ಯದಲ್ಲಿ ತಾಲಿಬಾನಿ ಕೊಲೆಗಡುಕ ಸರ್ಕಾರ ಆಡಳಿತ ಮಾಡುತ್ತಿದೆ. ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರು, ದಲಿತರು ಹಾಗೂ ನ್ಯಾಯಾಧೀಶರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಸಂಸದ ಶ್ರೀ ರಾಮುಲು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ತಾಲಿಬಾನಿ ಕೊಲೆಗಡುಕ ಸರ್ಕಾರ ಆಡಳಿತ ಮಾಡುತ್ತಿದೆ. ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರು, ದಲಿತರು ಹಾಗೂ ನ್ಯಾಯಾಧೀಶರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಸಂಸದ ಶ್ರೀ ರಾಮುಲು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರ ಮೇಲೆ ನಡೆದ ಹಲ್ಲೆಯನ್ನೂ ಕೂಡ ಖಂಡಿಸಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಎಂ ಸಚಿವ ಸಂಪುಟದ ಮೇಲೆಯೇ ಅನುಮಾನ ಬರುತ್ತಿದೆ. ಲೋಕಾಯುಕ್ತದಲ್ಲಿ ಕೆಲವರ ತನಿಖೆ ನಡೆಯುತ್ತಿದೆ.

ಸಿಎಂ ಮತ್ತು ಮಂತ್ರಿಗಳು ಸೇರಿ ಲೋಕಾಯುಕ್ತರ ಮೇಲೆ ಹಲ್ಲೆ  ನಡೆಸಿದ್ದಾರೆ. ಲೋಕಾಯುಕ್ತ ಹಾಳು ಮಾಡಿದರು. ಹಲ್ಲು ಕಿತ್ತು ಹಾವಿನಂತೆ ಮಾಡಿದರು. ಎಸಿಬಿ ತಂದು ಲೋಕಾಯುಕ್ತ ದರ್ಬಲ ಮಾಡಿದರು. ತನಿಖೆ ಮುಚ್ಚಲು ಈ ರೀತಿ ಹಲ್ಲೆ ಮಾಡಲಾಗಿದೆ.

ಲೋಕಾಯುಕ್ತ ಮುಗಿಸಲು ಪ್ಲಾನ್ ಮಾಡಲಾಗುತ್ತಿದೆ. ಅನುರಾಗ್ ತಿವಾರಿ ಹತ್ಯೆ ಹಿಂದೆ ಸಿಎಂ ಕೈವಾಡವಿದೆ. ತಿವಾರಿ ಪೋಷಕರು. ಆರೋಪ ಮಾಡಿದ್ದಾರೆ. ಆಹಾರ ಇಲಾಖೆಯಲ್ಲಿ ನಡೆದಿದ್ದ ಭಾರಿ ಭ್ರಷ್ಟಾಚಾರವನ್ನು ತಿವಾರಿ ಹೊರಹಾಕಿದ್ದರು.

ಡಿ.ಕೆ ರವಿ, ಗಣಪತಿ ಎಲ್ಲಾ ಪ್ರಕರಣಗಳಂತೆ ಲೋಕಾಯುಕ್ತ ಪ್ರಕರಣವೂ ಕೂಡ ಮುಚ್ಚಿ ಹೋಗುತ್ತದೆ. ಆದರೆ ವಿಶ್ವನಾಥ ಶೆಟ್ಟಿ ಮೇಲೆ ನಡೆದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು.  ತಾಲಿಬಾನಿನಂತೆ ಇಲ್ಲಿಯೂ ಕೂಡ ಕೊಲೆ, ಹಲ್ಲೆಗಳು ನಡೆಯುತ್ತದೆ. ಭದ್ರತೆ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶ್ರೀ ರಾಮುಲು ಹೇಳಿದ್ದಾರೆ.

loader