ಜನಾರ್ದನ ರೆಡ್ಡಿಗೆ ಅವಾಚ್ಯ ಶಬ್ದ ಬಳಸಿ ಹಿರೇಮಠ್‌ ನಿಂದನೆ

First Published 10, Apr 2018, 7:06 AM IST
SR Hiremath Slams Janardhan Reddy
Highlights

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ, ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಕ್ಷಮೆಯಾಚನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಧಾರವಾಡ: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ, ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಕ್ಷಮೆಯಾಚನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದ ಜೈಲು ಕಂಡಿರುವ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಜನರು ಬೆಂಬಲ ನೀಡಬಾರದು. ಬದಲಿಗೆ ಉತ್ತಮ ಚಿಂತನೆಗಳುಳ್ಳ ಮಹಾಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಹೇಳಿಕೆ ನೀಡಿದರು. ಈ ವೇಳೆ ರೆಡ್ಡಿ ಅವರನ್ನು ನಿಂದಿಸುವ ವೇಳೆ ಹಿಡಿತ ಕಳೆದುಕೊಂಡು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದರು. ಕೊನೆಗೆ ಈ ರೀತಿಯ ಶಬ್ದಗಳ ಬಳಕೆಗೆ ಕ್ಷಮೆ ಕೋರಿದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಾಂದೋಲನ ಮಹಾಮೈತ್ರಿಯನ್ನು ಬೆಂಬಲಿಸುತ್ತಿರುವ 20 ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.

loader