ಬಿಡದಿ ಹೋಬಳಿಯ ಕಾಡಗೇನಹಳ್ಳಿಯಲ್ಲಿ ಸುಮಾರು 200 ಕೋಟಿ ರೂ ಮೌಲ್ಯದ ಭೂಮಿ ಕಬಳಿಕೆಯಾಗಿದ್ದು, ಇದರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಕೈವಾಡ ಸಹ ಇದೆ ಎಂದು ಹಿರೇಮಠ್ ಆರೋಪಿಸಿದ್ದಾರೆ.
ಹುಬ್ಬಳ್ಳಿ(ಅ. 30): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಮತ್ತೆ ಆರೋಪ ಮಾಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 200 ಎಕರೆ ಭೂಕಬಳಿಕೆಯಾಗಿದ್ದು, ಇದರಲ್ಲಿ 100 ಎಕರೆ ಜಾಗವು ಗೋಮಾಳಕ್ಕೆ ಸಂಬಂಧಿಸಿದ ಜಾಗವಾಗಿದೆ. ಈ ಜಾಗವನ್ನು ಹೆಚ್'ಡಿಕೆ ಹಾಗೂ ಹತ್ತಿರದ ಸಂಬಂಧಿ ಮದ್ದೂರು ಶಾಸಕ ಬಿ.ಸಿ.ತಮ್ಮಣ ಎಂಬುವರು ಅತಿಕ್ರಮಣ ಮಾಡಿದ್ದಾರೆ ಎಂದು ಹಿರೇಮಠ್ ಬಾಂಬ್ ಸಿಡಿಸಿದ್ದಾರೆ.
ಬಿಡದಿ ಹೋಬಳಿಯ ಕಾಡಗೇನಹಳ್ಳಿಯಲ್ಲಿ ಸುಮಾರು 200 ಕೋಟಿ ರೂ ಮೌಲ್ಯದ ಭೂಮಿ ಕಬಳಿಕೆಯಾಗಿದ್ದು, ಇದರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಕೈವಾಡ ಸಹ ಇದೆ ಎಂದು ಹಿರೇಮಠ್ ಆರೋಪಿಸಿದ್ದಾರೆ. ಜಿ.ಮಾದೆಗೌಡ ಈ ಬಗ್ಗೆ 2013ರಲ್ಲಿ ದಾಖಲೆ ಸಮೇತ ದೂರು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗು ತಹಶೀಲ್ದಾರರಿಗೆ ದೂರು ನೀಡಲಾಗಿದೆ. ರಾಮನಗರ ಉಪವಿಭಾಗಧಿಕಾರಿಯು ಈ ಭೂಕಬಳಿಕೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿಯನ್ನು ಎಸ್ ಆರ್ ಹಿರೇಮಠ ಇಂದು ಪತ್ರಿಕಾಗೊಷ್ಠಿಯಲ್ಲಿ ಹೊರಹಾಕಿದ್ದಾರೆ.
