Asianet Suvarna News Asianet Suvarna News

ಯಾವುದೇ ತೆರಿಗೆಗಳಿಲ್ಲದೆ ಕೇವಲ 12 ರೂ.ಗೆ ದೇಶಿ ಹಾಗೂ ವಿದೇಶಿ ಪ್ರಯಾಣ: ಸ್ಪೈಸ್ ಜೆಟ್'ನಿಂದ ಭರ್ಜರಿ ಆಫರ್

ಯಾವುದೆ ತೆರಿಗೆ ಹಾಗೂ ಇತರ ಸರ್'ಚಾರ್ಜ್'ಗಳಿಲ್ಲದೆ  ಕೇವಲ 12 ರೂ.ಗಳಿಗೆ ದೇಶಿ ಹಾಗೂ ವಿದೇಶಿ ಪ್ರಯಾಣ ಮಾಡಲು ಅವಕಾಶ ಒದಗಿಸಿದೆ.

SpiceJet anniversary sale Fares start at Rs 12
  • Facebook
  • Twitter
  • Whatsapp

ನವದೆಹಲಿ(ಮೇ.23): ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ತನ್ನ 12ನೇ ವರ್ಷದ ಸಲುವಾಗಿ ಸಾರ್ವಜನಿಕರಿಗೆ ಭರ್ಜರಿ ಆಫರ್ ನೀಡುತ್ತಿದೆ.

ಯಾವುದೆ ತೆರಿಗೆ ಹಾಗೂ ಇತರ ಸರ್'ಚಾರ್ಜ್'ಗಳಿಲ್ಲದೆ  ಕೇವಲ 12 ರೂ.ಗಳಿಗೆ ದೇಶಿ ಹಾಗೂ ವಿದೇಶಿ ಪ್ರಯಾಣ ಮಾಡಲು ಅವಕಾಶ ಒದಗಿಸಿದೆ. ಮೇ.23, 2017 ರಿಂದ ಮೇ.28 ವರೆಗೆ ಮಾತ್ರ ಬುಕ್ಕಿಂಗ್ ಆಫರ್ ಲಭ್ಯವಿದೆ. ಪ್ರಯಾಣದ ಅವಧಿಯನ್ನು ಜೂನ್ 26,2017 ರಿಂದ ಮಾರ್ಚ್ 24, 2018ರವರೆಗೆ ಒದಗಿಸಲಾಗುತ್ತದೆ.

12 ರೂ. ಆಫರ್'ನ ಆಸನಗಳು ನಿಗದಿತವಾಗಿದ್ದು, ಯಾರು ಮೊದಲಿಗೆ ಬುಕ್ ಮಾಡುತ್ತಾರೆ ಅವರಿಗೆ ಲಭ್ಯವಾಗುವ ಅವಕಾಶವಿದೆ' ಎಂದು ಕಂಪನಿ ತಿಳಿಸಿದೆ.ಸಂಸ್ಥೆಯು ಅರ್ಹ ಪ್ರಯಾಣಿಕರಿಗೆ ಲಕ್ಕಿ ಡ್ರಾ ಆಫರ್ ಕಟೆಂಸ್ಟ್ ಕೂಡ ಏರ್ಪಡಿಸಿದ್ದು, ಇದರಲ್ಲಿ ವಿಜೇತರಾಗುವವರಿಗೆ ಉಚಿತ ದೇಶಿಯ ಹಾಗೂ ಅಂತರರಾಷ್ಟ್ರೀಯ ಟಿಕೆಟ್'ಗಳು ಲಭ್ಯವಿರುತ್ತದೆ. ಜೊತೆಗೆ 10 ಸಾವಿರ ರೂ.ಗಳ ಹೋಟೆಲ್ ವೋಚರ್ ಕೂಡ ಒಳಗೊಂಡಿರುತ್ತವೆ.    

39 ದೇಶಿಯ ಹಾಗೂ 7 ಅಂತರರಾಷ್ಟ್ರೀಯ ಸ್ಥಳಗಳಿಗೆ ನಿತ್ಯ 358 ವಿಮಾನಯಾನ ಸೇವೆಯನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಪೈಸ್ ಜೆಟ್ ವೆಬ್'ಸೈಟ್'ಅನ್ನು ಸಂಪರ್ಕಿಸುವುದು.

Follow Us:
Download App:
  • android
  • ios