ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನದ ಗಗನಸಖಿಯರ ಬಟ್ಟೆ ಬಿಚ್ಚಿಸಿ, ಪರಿಶೀಲನೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನವದೆಹಲಿ: ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನದ ಗಗನಸಖಿಯರ ಬಟ್ಟೆ ಬಿಚ್ಚಿಸಿ, ಪರಿಶೀಲನೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಮಾನ ಪ್ರಯಾಣದ ವೇಳೆ ಆಹಾರ ಮತ್ತು ಇತರ ವಸ್ತುಗಳ ಮಾರಾಟದಿಂದ ಬಂದ ಹಣವನ್ನು ಬಚ್ಚಿಟ್ಟುಕೊಳ್ಳುತ್ತಿದ್ದಾರೆ ಎಂಬ ಗುಮಾನಿ ಮೇರೆಗೆ ವಿಮಾನ ಇಳಿದು, ಹೊರಬಂದಾಗ ತಮ್ಮನ್ನು ಬೆತ್ತಲಾಗಿಸಿ, ಪರಿಶೀಲನೆ ನಡೆಸಲಾಗಿದೆ ಎಂದು ಸಿಬ್ಬಂದಿಯೊಬ್ಬರು ದೂರಿದ್ದಾರೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಪೈಸ್‌ಜೆಟ್, ‘ಭದ್ರತೆ ಮತ್ತು ಸುರಕ್ಷತಾ ಕ್ರಮದ ಭಾಗ ವಾಗಿ, ಕೆಲ ನಿಲ್ದಾಣಗಳಲ್ಲಿ ರಾತ್ರಿ ಹೊತ್ತು ಭದ್ರತಾ ತಂಡ ಪರಿಶೀಲನೆ ನಡೆಸಿದೆ.‘ಸಂಸ್ಥೆಯ ಹಣ, ವಸ್ತು, ಕಳ್ಳ ಸಾಗಣೆ ಅಥವಾ ಅಕ್ರಮ ಚಟುವಟಿಕೆಯಲ್ಲಿ ಯಾವುದೇ ನೌಕರ ಇಲ್ಲ ಎಂಬುದರ ಖಾತ್ರಿಗಾಗಿ ಪರಿಶೀಲನೆ ನಡೆಸಲಾಗುತ್ತದೆ.

ನಿಯಮಗಳ ಪ್ರಕಾರ, ಮುಚ್ಚಿದ ಕೋಣೆಗಳಲ್ಲಿ ಸೂಕ್ತ ತರಬೇತಿ ಪಡೆದ ನೌಕರಸ್ಥರಿಂದಲೇ ಪರಿಶೀಲನೆ ನಡೆಸಲಾಗುತ್ತದೆ,’ ಎಂದು ವಕ್ತಾರರು ತಿಳಿಸಿದ್ದಾರೆ.