ವಿಧಾನಸಭೆಯಲ್ಲಿಂದು  ಪೊಲೀಸರ ವೇತನ ಹೆಚ್ಚಳದ ವಿಚಾರ ಸಿಎಂ ಮತ್ತು ಜಗದೀಶ್ ಶೆಟ್ಟರ್​ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.ಪ್ರಶ್ನೋತ್ತರ  ಅವಧಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್​, ಪೊಲೀಸರು ಬೀದಿಗೆ ಇಳಿಯುವುದನ್ನು ನಿರ್ಮಿಸಬೇಡಿ ಎಂದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನೀವು ಸಿಎಂ ಆಗಿದ್ದಾಗ ಪೊಲೀಸರಿಗೆ ಆದ ತಾರತಮ್ಮ ಕಾಣಲಿಲ್ಲವೇ? ಅಂತ ತಿರುಗೇಟು ನೀಡಿದ್ರು.

ಬೆಂಗಳೂರು(ನ.29): ವಿಧಾನಸಭೆಯಲ್ಲಿಂದು ಪೊಲೀಸರ ವೇತನ ಹೆಚ್ಚಳದ ವಿಚಾರ ಸಿಎಂ ಸಿದ್ದರಾಮಯ್ಯ ಮತ್ತು ಜಗದೀಶ್ ಶೆಟ್ಟರ್​ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್​, ಪೊಲೀಸರು ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಿಸಬೇಡಿ ಎಂದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನೀವು ಸಿಎಂ ಆಗಿದ್ದಾಗ ಪೊಲೀಸರಿಗೆ ಆದ ತಾರತಮ್ಮ ಕಾಣಲಿಲ್ಲವೇ? ಅಂತ ತಿರುಗೇಟು ನೀಡಿದರು.

ನಾನು ಕೇವಲ 10 ತಿಂಗಳು ಮಾತ್ರ ಸಿಎಂ ಆಗಿದ್ದೆ. ನೀವು ಪೂರ್ಣಾವಧಿ ಸಿಎಂ ಆಗಿದ್ದಿರಿ, ವೇತನ ಹೆಚ್ಚಳ ಜಾರಿಗೆ ತನ್ನಿ ಎಂದ ಶೆಟ್ಟರ್​ ಪ್ರತ್ಯುತ್ತರ ನೀಡಿದರು. ನಿಮ್ಮಿಂದ ನಾವು ಪಾಠ ಕಲಿಯಬೇಕಾಗಿಲ್ಲ, ನಮಗೂ ಕಾಳಜಿ ಇದೆ. 2017ರ ಬಜೆಟ್​ನಲ್ಲಿ ವೇತನ ಆಯೋಗ ಘೋಷಣೆ ಮಾಡುತ್ತೇವೆ ಅಂತ ಸಿಎಂ ಮಾರುತ್ತರ ನೀಡಿದರು.