ಪರಾರಿ ವೀರರ ಕರೆತರಲು ವೀಸಾ ದೇವಾಲಯದಲ್ಲಿ ವಿಶೇಷ ಪೂಜೆ!

First Published 20, Feb 2018, 8:52 AM IST
Special prayers at Hyderabad Temple for Solving Fraud Case
Highlights

ವೀಸಾ ದೇವಾಲಯ ಎಂದೇ ಖ್ಯಾತಿ ಪಡೆದ ಹೈದ್ರಾಬಾದ್‌ನ ಚಿಲ್ಕೂರ್‌ ಬಾಲಾಜಿ ದೇವಾಲಯದ ಅರ್ಚಕರು, ಬ್ಯಾಂಕಿಂಗ್‌ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ನಿವಾರಣೆಗೆ ಮತ್ತು ವಂಚಕರನ್ನು ಭಾರತಕ್ಕೆ ಕರೆತರಲು ಸೋಮವಾರ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಹೈದರಾಬಾದ್‌: ವಜ್ರೋದ್ಯಮಿ ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 11,400 ಕೋಟಿ ರು. ವಂಚಿಸಿ ನ್ಯೂಯಾರ್ಕ್ ಪಂಚತಾರಾ ಹೋಟೆಲ್‌ನಲ್ಲಿ ನೆಲೆಸಿರಬಹುದು.

ಆದರೆ, ‘ವೀಸಾ’ ದೇವಾಲಯ ಎಂದೇ ಖ್ಯಾತಿ ಪಡೆದ ಹೈದ್ರಾಬಾದ್‌ನ ಚಿಲ್ಕೂರ್‌ ಬಾಲಾಜಿ ದೇವಾಲಯದ ಅರ್ಚಕರು, ಬ್ಯಾಂಕಿಂಗ್‌ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ನಿವಾರಣೆಗೆ ಮತ್ತು ವಂಚಕರನ್ನು ಭಾರತಕ್ಕೆ ಕರೆತರಲು ಸೋಮವಾರ ವಿಶೇಷ ಪೂಜೆ ನೆರವೇರಿಸಿದ್ದಾರೆ.

ತಮ್ಮ ಪ್ರಾರ್ಥನೆಯಿಂದ ವಿದೇಶಕ್ಕೆ ಪರಾರಿಯಾದವರನ್ನು ಭಾರತಕ್ಕೆ ಕರೆ ತರುವ ಯತ್ನ ಫಲಕೊಡುವುದಾಗಿ ಹೇಳಿದ್ದಾರೆ. ದೇವಾಲಯದ ಸಿಂಹ ದೇವರನ್ನು ಆಹ್ವಾನಿಸಲು ಅರ್ಚಕರು ‘ಋುಣ ವಿಮೋಚನಾ ನರಸಿಂಹ ಸ್ತೋತ್ರ’ಗಳನ್ನು ಅರ್ಚಕರು ಪಠಿಸಿದ್ದಾರೆ.

ವೀಸಾ ಪಡೆಯಲು ತೊಂದರೆ ಅನುಭವಿಸುತ್ತಿರುವ ಸಾವಿರಾರು ಜನರು ಚಿಲ್ಕೂರ್‌ ಬಾಲಾಜಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಚಿಲ್ಕೂರ್‌ ಬಾಲಾಜಿ ದೇವಾಲಯ ವೀಸಾ ದೇವಾಲಯ ಎಂದೇ ಖ್ಯಾತಿ ಪಡೆದಿದೆ.

loader