ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಬಹುಕೋಟಿ ಮೇವು ಹಗರಣದ ಅಪರಾಧಿ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್ ಭವಿಷ್ಯ ನಾಳೆ ಹೊರಬೀಳಲಿದೆ.

ಪಾಟ್ನಾ (ಜ.02): ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಬಹುಕೋಟಿ ಮೇವು ಹಗರಣದ ಅಪರಾಧಿ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್ ಭವಿಷ್ಯ ನಾಳೆ ಹೊರಬೀಳಲಿದೆ.

ಡಿಸೆಂಬರ್ 23ರಂದು ಜಾರ್ಖಂಡ್ ನ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯ ಲಾಲೂ ಅಪರಾಧಿ ಎಂದು ತೀರ್ಪು ನೀಡಿತ್ತು. ಸದ್ಯ ಜೈಲಿನಲ್ಲಿ ರುವ ಲಾಲೂಗೆ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಲಾಲೂ ಪ್ರಸಾದ್ ಯಾದವ್ ಗೆ 2ರಿಂದ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಲಾಲೂ ಜೈಲು ಪಾಲಾದರೆ ಚುನಾವಣೆ ಸ್ಪರ್ಧೆಗೆ ನಿರ್ಬಂಧ ಬೀಳಲಿದೆ. ಇನ್ನೂ ನಾಳಿನ ತೀರ್ಪು ಆರ್ ಜೆಡಿ ಭವಿಷ್ಯದ ಮೇಲೆ ಭಾರೀ ಪರಿಣಾಮ ಬೀರಲಿದೆ. ಕಾರ್ಯಕರ್ತರು ಪಕ್ಷದ ಕಚೇರಿ ಎದುರು ಹಾಜರಿರುವಂತೆ ಸೂಚಿಸಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.