ಬೆಂಗಳೂರು [ಜು.20]: ಅಕ್ರಮ ಗಣಿಗಾರಿಕೆ ಪ್ರಕರಣದಿಂದ ತಮ್ಮ ಹೆಸರು ಕೈ ಬಿಡುವಂತೆ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಲ್ಲಿ ಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.

ಅಲ್ಲದೆ, ಪ್ರಕರಣದ ಇತರ ಆರೋಪಿಗಳಾದ ಜನಾರ್ದನ ರೆಡ್ಡಿ ಆಪ್ತ ಕೆ.ಎಂ.ಅಲಿಖಾನ್ ಮತ್ತು ಬಿ.ವಿ.ಶ್ರೀನಿವಾಸ ರೆಡ್ಡಿ ಸಲ್ಲಿಸಿದ್ದ ಅರ್ಜಿ ಯನ್ನೂ ನ್ಯಾಯಾಧೀಶರು ವಜಾಗೊಳಿಸಿ ದ್ದಾರೆ. ಆರೋಪಿಗಳು ಅದಿರು ಕಳವು ಮಾಡಿರುವ ಬಗ್ಗೆ ಸಂಚು ರೂಪಿಸಿ ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಆರೋಪಿಗಳ ವಿರುದ್ಧ ವಿಚಾರಣೆ ನಡೆಸುವ ಅಗತ್ಯವಿದೆ. 

ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ವಿಚಾರಣೆ ಎದುರಿಸಲಿ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಜನಾರ್ದನ ರೆಡ್ಡಿ ಹಾಗೂ ಇತರರು ಎಂ. ನಾಶಿಕ್ ಸಾಬ್ ಎಂಬುವರಿಗೆ ಸೇರಿದ ಮೆಸರ್ಸ್ ಇಂಡಿಯನ್ ಮೈನ್ಸ್ ಕಂಪನಿಯನ್ನು ತಮ್ಮ ವಶಕ್ಕೆ ಪಡೆದಿದ್ದರು. ಅ ಕಂಪನಿಯ ಹೆಸರಿನಲ್ಲಿ ಮಿತಿಗಿಂತ ಅಧಿಕ ಕಬ್ಬಿಣದ ಅದಿರು ಹೊರ ತೆಗೆ ದು ಸಾಗಿಸಿದ್ದರು. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಿತ್ತು ಎಂದು ಪ್ರಕರಣ ದಾಖಲಾಗಿತ್ತು.