ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಬಾಬರೀ ಮಸಿದಿ ದ್ವಂಸ ಪ್ರಕರಣವನ್ನು ಪ್ರತಿ ನಿತ್ಯ ವಿಚಾರಣೆ ನಡೆಸಲು ಆರಂಭಿಸಿರುವ ವಿಶೇಷ ಸಿಬಿಐ ನ್ಯಾಯಾಲಯವು 5 ಮಂದಿ ವಿಶ್ವ ಹಿಂದೂ ಪರಿಷತ್ ನಾಯಕರಿಗೆ ಜಾಮೀನು ನೀಡಿದೆ.
ಲಕ್ನೋ (ಮೇ. 21): ಬಾಬರೀ ಮಸೀದಿ ಧ್ವಂಸ ಪ್ರಕರಣಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು 5 ಮಂದಿ ಆರೋಪಿಗಳಿಗೆ ಜಾಮೀನು ನೀಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಬಾಬರೀ ಮಸಿದಿ ದ್ವಂಸ ಪ್ರಕರಣವನ್ನು ಪ್ರತಿ ನಿತ್ಯ ವಿಚಾರಣೆ ನಡೆಸಲು ಆರಂಭಿಸಿರುವ ವಿಶೇಷ ಸಿಬಿಐ ನ್ಯಾಯಾಲಯವು 5 ಮಂದಿ ವಿಶ್ವ ಹಿಂದೂ ಪರಿಷತ್ ನಾಯಕರಿಗೆ ಜಾಮೀನು ನೀಡಿದೆ.
ಧ್ವಂಸ ಪ್ರಕರಣವನ್ನು ಒಂದು ತಿಂಗಳಿನೊಳಗೆ ಪ್ರತಿದಿನ ವಿಚಾರಣೆ ನಡೆಸಿ, ಎರಡು ವರ್ಷಗಳೊಳಗೆ ಅಂತಿಮ ತೀರ್ಪನ್ನು ನೀಡುವಂತೆ ಕಳೆದ ಏ.19ರಂದು ಸುಪ್ರೀಂ ಕೋರ್ಟ್ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸೂಚಿಸಿತ್ತು.
ಬಳಿಕ ಆರು ಮಂದಿ ಅರೋಪಿಗಳಿಗೆ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತ್ತು. ಅವರ ಪೈಕಿ 5 ಮಂದಿ ನ್ಯಾಯಾಲಯದಲ್ಲಿ ಹಾಜರಾಗಿ ಜಾಮೀನಿಗೆ ಮನವಿ ಮಾಡಿದ್ದರು. ಮುಂದಿನ ವಿಚಾರಣೆಯನ್ನು ಸೋಮವಾರದಂದು (ಮೇ.22) ನಿಗದಿಪಡಿಸಲಾಗಿದೆ.