ಸುಪ್ರೀಂಕೋರ್ಟ್‌ ನಿರ್ದೇಶಾ​ನು​ಸಾರ ಸಿಬಿಐ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಮೇ 20ರಿಂದ ದಿನನಿತ್ಯ ವಿಚಾರಣೆ ನಡೆ​ಸುತ್ತಿದೆ. ರಾಯ್‌ಬರೇಲಿ​ಯಲ್ಲಿದ್ದ ಪ್ರತ್ಯೇ​ಕ ಪ್ರಕರಣವನ್ನು ಲಖನೌ ಸಿಬಿಐ ನ್ಯಾಯಾಲಯಕ್ಕೇ ವರ್ಗಾಯಿಸಿ ನಿತ್ಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಏ.19ರಂದು ಆದೇಶಿಸಿತ್ತು.

ಲಖನೌ: 1992ರಲ್ಲಿ ಸಂಭವಿಸಿದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್‌.ಕೆ. ಅಡ್ವಾಣಿ, ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ ಮುರಳಿ ಮನೋಹರ್ ಜೋಷಿಗೆ ಮೇ.30ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ಸಿಬಿಐ ನ್ಯಾಯಾ​ಲಯ ಸೂಚಿಸಿದೆ.

ಸುಪ್ರೀಂಕೋರ್ಟ್‌ ನಿರ್ದೇಶಾ​ನು​ಸಾರ ಸಿಬಿಐ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಮೇ 20ರಿಂದ ದಿನನಿತ್ಯ ವಿಚಾರಣೆ ನಡೆ​ಸುತ್ತಿದೆ. ರಾಯ್‌ಬರೇಲಿ​ಯಲ್ಲಿದ್ದ ಪ್ರತ್ಯೇ​ಕ ಪ್ರಕರಣವನ್ನು ಲಖನೌ ಸಿಬಿಐ ನ್ಯಾಯಾಲಯಕ್ಕೇ ವರ್ಗಾಯಿಸಿ ನಿತ್ಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಏ.19ರಂದು ಆದೇಶಿಸಿತ್ತು.

ಅಡ್ವಾಣಿ ಅಲ್ಲದೆ, ಉಮಾಭಾರತಿ, ಮುರಳಿ ಮನೋಹರ ಜೋಶಿ, ಸೇರಿದಂತೆ ಅನೇಕ ಬಿಜೆಪಿ ಹಾಗೂ ಬಲಪಂಥೀಯ ಮುಖಂಡರು ಪ್ರಕರಣದ ಆರೋಪಿಗಳಾಗಿದ್ದಾರೆ. ಈಗ ರಾಜಸ್ಥಾನದ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಕೂಡಾ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರಿಗೆ ಸಾಂವಿಧಾನಿಕ ರಕ್ಷಣೆ ಇದೆ. ಆ ಹುದ್ದೆಯನ್ನು ಬಿಟ್ಟ ಬಳಿಕ ಅವರು ವಿಚಾರಣೆಗೊಳಬೇಕಾಗುತ್ತದೆ.