ನವದೆಹಲಿ(ಆ.22): ಮಹತ್ವದ ಬೆಳವಣಿಗೆಯೊಂದರಲ್ಲಿ INX ಮಿಡಿಯಾ ಹೌಸ್ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಆ.26ರವರೆಗೆ ಕಸ್ಟಡಿಗೆ ಪಡೆಯುವಲ್ಲಿ ಸಿಬಿಐ ಯಶಸ್ವಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಮತ್ತು ಕಕ್ಷಿದಾರರ ವಾದ ಆಲಿಸಿದ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ, ಚಿದಂಬರಂ ಅವರನ್ನು 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ತೀರ್ಪು ನೀಡಿತು.

ಇದೇ ವೇಳೆ ಕಕ್ಷಿದಾರರ ಪರ ವಾದ ಮಂಡಿಸಿದ ವಕೀಲರದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ, ಚಿದಂಬರಂ ಅವರನ್ನು ಬಿಡುಗಡೆಗೊಳಿಸುವಂತೆ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಆದರೆ ದಿನಕ್ಕೆ 30 ನಿಮಿಷಗಳ ಕಾಲ ಸಂಬಂಧಿಕರು ಹಾಗೂ ಕಕ್ಷಿದಾರ ಪರ ವಕೀಲರ ಭೇಟಿಗೆ ಸಿಬಿಐ ನ್ಯಾಯಾಲಯ ಸಮ್ಮತಿ ನೀಡಿದೆ. 

ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೇ, ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದರು.