ಬೆಂಗಳೂರು[ಜು.09]: ಕಳೆದೊಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ದೋಸ್ತಿ ಸರ್ಕಾರದ ಶಾಸಕರು ಒಬ್ಬರಾದ ಬಳಿಕ ಮತ್ತೊಬ್ಬರಂತೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದು, ಸರ್ಕಾರ ಇನ್ನೇನು ಪತನಗೊಳ್ಳುತ್ತೆ ಎಂದು ಅಂದಾಜಿಸಲಾಗಿತ್ತು. ಆದರೀಗ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಸ್ಪಷ್ಟನೆ ಮೈತ್ರಿ ಸರ್ಕಾರ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.

"

ತೃಪ್ತರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ 'ನನ್ನಿಂದ ಯಾವುದೇ ತಪ್ಪಾಗಬಾರದು, ಜನರ ಮನಸ್ಸಿನ ಭಾವನೆ ನನಗೆ ಗೊತ್ತಿದೆ. ನಾನು ಕಚೇರಿ ಇಲ್ಲದ ವೇಳೆ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಅತೃಪ್ತರ ರಾಜೀನಾಮೆ ತುರ್ತು ಅಂಗೀಕಾರ ಇಲ್ಲ. ಪ್ರತಿಯೊಬ್ಬರನ್ನು ಕರೆಸಿ ಪ್ರತ್ಯೇಕವಾಗಿ ಮಾತನಾಡುವೆ ಹಾಗೂ ಕಾನೂನು ರೀತಿಯಲ್ಲೇ ರಾಜೀನಾಮೆ ಪರಿಶೀಲನೆ ನಡೆಸುತ್ತೇನೆ' ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಈ ಹೇಳಿಕೆಯಿಂದ ಪತನದ ಅಂಚಿನಲ್ಲಿದ್ದ ಎಚ್. ಡಿ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಕೆಲ ಹೊತ್ತಿಗಾದರೂ ನಿಟ್ಟುಸಿರು ಬಿಡುವಂತೆ ಮಾಡಿದೆ.

"