ಸಾಮಾಜಿಕ ಜಾಲಾತಾಣಗಳಲ್ಲಿ ಹೆಗಲ ಮೇಲೆ ಹಾರೆ ಹೊತ್ತುಕೊಂಡು, ಹೊಲದಲ್ಲಿ ನಿಂತಿರುವ ಮಹಿಳೆಯೊಬವ್ಬರ ಫೋಟೋ ಒಂದು ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಈಕೆಯ ಮುಖ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಹೋಲುತ್ತಿರುವುದು. ಹಾಗಾದ್ರೆ ಆಕೆ ಯಾರು? ಇನ್ಸ್ಟಾಗ್ರಾಂನಲ್ಲಿ ಹುಡುಕಾಟ ನಡೆಸಿದಾಗ ಕಂಡು ಬಂದ ಸತ್ಯ ಏನು? ಇಲ್ಲಿದೆ ವಿವರ

ವಾಯುವ್ಯ ಸ್ಪೇನ್ ನಲ್ಲಿ Paula Vázquez ಹೆಸರಿನ ಸ್ವತಂತ್ರ ಪತ್ರಕರ್ತೆಯೊಬ್ಬರು, ವರದಿಗಾಗಿ ಅಲ್ಲಿನ ಗ್ರಾಮೀಣ ಕ್ಷೇತ್ರ Cabana de Bergantiños ಎಂಬ ಪ್ರದೇಶದ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಆಕೆ ಒಂದು ಲೇಖನದ ಅಧ್ಯಯನಕ್ಕಾಗಿ Dolores Leis Antelo ಎಂಬ ಹೆಸರಿನ ಮಹಿಳೆಯನ್ನು ಭೇಟಿಯಾಗಿದ್ದಾರೆ. ವೃತ್ತಿಯಲ್ಲಿ ರೈತ ಮಹಿಳೆಯಾಗಿದ್ದ Antelo ನೋಡಲು ಟ್ರಂಪ್ ರಂತೆ ಕಾಣುತ್ತಿದ್ದರು. 

ಪತ್ರಕರ್ತೆ ಆ ಕೂಡಲೇ ಈ ರೈ ಮಹಿಳೆಯ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಹಲವರ ಗಮನ ಸೆಳೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಕೆ ನೋಡಲು ಟಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಂತೆ ಕಾಣುತ್ತಿದ್ದು, ಎಲ್ಲರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಈ ಪೋಟೋ ವೈರಲ್ ಆಗಿದೆ.

ಇಂಟರ್ನೆಟ್ ಸೆಲೆಬ್ರಿಟಿ:

ಹಾಫಿಂಗ್ಟನ್ ಪೋಸ್ಟ್ ಅನ್ವಯ ಆ್ಯಂಟಿಲೋ ಮದುವೆಯಾಗಿ ಬರೋಬ್ಬರಿ 40 ವರ್ಷಗಳಾಗಿದ್ದು, ಅಂದಿನಿಂದ ಅವರು ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಆ್ಯಂಟಿಲೋ ಬಳಿ ಯಾವುದೇ ಫೋನ್ ಅಥವಾ ಕಂಪ್ಯೂಟರ್ ಇಲ್ಲ, ಹೀಗಿದ್ದರೂ ಅವರು ಇಂಟರ್ನೆಟ್ ಸೆಲೆಬ್ರಿಟಿ ಎಂಬುವುದು ನಂಬಲೇಬೇಕಾದ ವಿಚಾರ.

ಆ್ಯಂಟಿಲೋ ಫೋಟೋವನ್ನು ಟ್ವಿಟರ್ ನಲ್ಲಿ #SenoraTrump ಎಂಬ ಹ್ಯಾಷ್ ಟ್ಯಾಗ್ ಜೊತೆಗೆ ಶೇರ್ ಮಾಡಲಾಗಿತ್ತು. ಇದಾದ ಬಳಿಕ ಹಲವಾರು ಪತ್ರಿಕೆಗಳು ಅವರ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು ನನ್ನ ಪೋಟೋ ಬಹಳಷ್ಟು ದೂರದೂರುಗಳ ಪಯಣ ನಡೆಸಿದೆ. ಇಷ್ಟೆಲ್ಲಾ ಆಗಲು ನನ್ನ ಕೂದಲ ಬಣ್ಣವೇ ಕಾರಣ ಎಂದಿದ್ದಾರೆ.

ಆದರೆ ಇವರ ಮಗಳು ತನ್ನ ತಾಯಿಯನ್ನು ಇಂಟರ್ನೆಟರ್ ನಲ್ಲಿ ಫೇಮಸ್ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಆಕೆ ವಿವಿಧ ಫೋಸ್ ನಲ್ಲಿರುವ ತನ್ನ ತಾಯಿಯ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ,

ಸದ್ಯ ಈ ಫೋಟೋ ಜೊತೆ ಟ್ರಂಪ್ ಫೋಟೋ ಎಡಿಟ್ ಮಾಡಿ ಜನರು ಶೇರ್ ಮಾಡಿಕೊಳ್ಳುತ್ತಿದ್ದು, ಇದು ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.