ತಮ್ಮ ಮಾತು ಹಾಗೂ ಕೃತಿಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲವೆಂದು ಹೇಳಿದ ಅಖಿಲೇಶ್, ಕಳೆದ ಬಾರಿಯೂ ನಾವು ನಮ್ಮ ಆಶ್ವಾಸನೆಗಳಿಗೆ ಬದ್ಧರಾಗಿದ್ದೆವು, ಮುಂದೆಯೂ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ನಾವು ಬದ್ಧರಾಗಿರುವೆವು ಎಂದು ಹೇಳಿದ್ದಾರೆ.

ಲಕ್ನೋ (ಜ.22): ಮುಂದಿನ ತಿಂಗಳು ನಡೆಯಲಲಿರುವ ವಿಧಾನಸಭೆ ಚುನಾವಣೆಗಳಿಗೆ ಸಮಾಜವಾದಿ ಪಕ್ಷ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಸಮಾಜವಾದಿ ಪಕ್ಷದ ಬಿಕ್ಕಟ್ಟು ಆರಂಭವಾದ ಬಳಿಕ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಖಿಲೇಶ್ ಯಾದವ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಕಾಣಿಸಿಕೊಳ್ಳಲಿಲ್ಲ.

ತಮ್ಮ ಮಾತು ಹಾಗೂ ಕೃತಿಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲವೆಂದು ಹೇಳಿದ ಅಖಿಲೇಶ್, ಕಳೆದ ಬಾರಿಯೂ ನಾವು ನಮ್ಮ ಆಶ್ವಾಸನೆಗಳಿಗೆ ಬದ್ಧರಾಗಿದ್ದೆವು, ಮುಂದೆಯೂ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ನಾವು ಬದ್ಧರಾಗಿರುವೆವು ಎಂದು ಹೇಳಿದ್ದಾರೆ.

ತನ್ನ ಭಾಷಣದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯನ್ನು ಟೀಕಿಸಿದ ಅಖಿಲೇಶ್, ಆಕೆ ಅಧಿಕಾರಕ್ಕೆ ಬಂದರೆ ಕೇವಲ ಆನೆಯ ದೊಡ್ಡ-ದೊಡ್ಡ ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಮಾಜವಾದಿ ಪ್ರಣಾಳಿಕೆಯ ಮುಖ್ಯಾಂಶಗಳು:

ಬಡ ಮಹಿಳೆಯರಿಗೆ ಪ್ರೆಶರ್ ಕುಕ್ಕರ್’ಗಳು

ಸಮಾಜವಾದಿ ಸ್ಮಾರ್ಟ್ ಫೋನ್ ಯೋಜನೆ

ಮಹಿಳೆಯರಿಗೆ ಬಸ್ಸುಗಳಲ್ಲಿ ಶೇ.50 ರಿಯಾಯಿತಿ

ಒಂದಉ ಕೋಟಿ ಮಹಿಳೆಯರಿಗೆ ರೂ.1000 ಮಾಸಿಕ ಪಿಂಚಣಿ

ಗ್ರಾಮೀಣ ಪ್ರದೇಶದಲ್ಲಿ 24-ಗಂಟೆ ವಿದ್ಯುತ್ ಸೌಲಭ್ಯ

ಲಕ್ನೋ’ನಲ್ಲಿ ಏರ್-ಅಂಬ್ಯುಲೆನ್ಸ್

ಕಾರ್ಪೆಟ್ ಹಾಗೂ ಕರಕುಶಲ ದ್ಯಮಕ್ಕೆ ಉತ್ತೇಜನ