`ಮಹಿಳೆಯರನ್ನ ಪೆಟ್ರೋಲ್`ಗೆ ಹೋಲಿಸಿರುವ ಅಬು ಅಜ್ಮಿ, ಪೆಟ್ರೋಲ್ ಅನ್ನ ಬೆಂಕಿಯಿಂದ ದೂರ ಇಡಬೇಕು. ಅದೇ ರೀತಿ ಅಲ್ಲಿ ಸಕ್ಕರೆ ಇದ್ದರೆ ತನ್ನಷ್ಟಕ್ಕೆ ತಾನೇ ಇರುವೆಗಳು ಬರುತ್ತವೆ. ಇಂದಿನ ಸಮಾಜದಲ್ಲಿ ವಿದ್ಯಾವಂತ ಮಹಿಳೆಯರು ಅರೆಬರೆ ಬಟ್ಟೆ ಧರಿಸುತ್ತಿದ್ದಾರೆ. ಇದರಿಂದಾಗಿ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಿವೆ' ಎಂದಿದ್ದಾರೆ.

ನವದೆಹಲಿ(ಜ.03): ಹೊಸ ವರ್ಷ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಅಬು ಅಸಿಮ್ ಅಜ್ಮಿ ವಿವಾದಾತ್ಮಕ ಹೇಳಿಕೆ ನೀಡುವ ಟೀಕೆಗೆ ಗುರಿಯಾಗಿದ್ದಾರೆ.