ಬೆಂಗಳೂರು-ಮೈಸೂರು ರಸ್ತೆಯ ರಾಮೋಹಳ್ಳಿ ಗೇಟ್ ಬಳಿ ಎಸ್ಪಿ ಪ್ರಯಾಣಿಸುತ್ತಿದ್ದ  KA 01, G - 5856 ನಂಬರ್​ನ ಸ್ವಿಫ್ಟ್​ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್'ಗೆ ಅಪ್ಪಳಿಸಿ ನಂತರ ಟಿಪ್ಪರ್'ಗೆ ಡಿಕ್ಕಿಯಾದ ಕಾರಣ ಈ ಅಪಘಾತ ಸಂಭವಿಸಿದೆ.

ಬೆಂಗಳೂರು(ಫೆ.22): ರಸ್ತೆ ಅಪಘಾತದಲ್ಲಿ ಎಸ್​​​ಪಿ ಸೇರಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ರಾಮೋಹಳ್ಳಿ ಗೇಟ್ ಬಳಿ ನಡೆದಿದೆ. ಮೈಸೂರು ಲೋಕಾಯುಕ್ತ ಎಸ್'ಪಿ ರವಿ'ಕುಮಾರ್ ಹಾಗೂ ಚಾಲಕ ಕಿರಣ್'ಕುಮಾರ್ ಮೃತರು. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾಗ ಬೆಂಗಳೂರು-ಮೈಸೂರು ರಸ್ತೆಯ ರಾಮೋಹಳ್ಳಿ ಗೇಟ್ ಬಳಿ ಎಸ್ಪಿ ಪ್ರಯಾಣಿಸುತ್ತಿದ್ದ KA 01, G - 5856 ನಂಬರ್​ನ ಸ್ವಿಫ್ಟ್​ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್'ಗೆ ಅಪ್ಪಳಿಸಿ ನಂತರ ಟಿಪ್ಪರ್'ಗೆ ಡಿಕ್ಕಿಯಾದ ಕಾರಣ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಎಸ್​​ಪಿ ರವಿಕುಮಾರ್ ಮೃತಪಟ್ಟಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.