ಮತ್ತೆ ಚಿಕ್ಕಮಗಳೂರು ಎಸ್ ಪಿಯಾಗಿ ಅಣ್ಣಾಮಲೈ ವರ್ಗಾವಣೆ

First Published 20, May 2018, 12:57 PM IST
SP annamalai Return Chikmagalur
Highlights

 ದಕ್ಷ ಅಧಿಕಾರಿ ಎಂದು ಖ್ಯಾತಿ ಗಳಿಸಿದ ಎಸ್ಪಿ ಅಣ್ಣಾಮಲೈ ಅವರನ್ನು ಮತ್ತೆ ಚಿಕ್ಕಮಗಳೂರಿಗೆ  ಮರು ವರ್ಗಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. 

ಬೆಂಗಳೂರು(ಮೇ.17): ದಕ್ಷ ಅಧಿಕಾರಿ ಎಂದು ಖ್ಯಾತಿ ಗಳಿಸಿದ ಎಸ್ಪಿ ಅಣ್ಣಾಮಲೈ ಅವರನ್ನು ಮತ್ತೆ ಚಿಕ್ಕಮಗಳೂರಿಗೆ  ಮರು ವರ್ಗಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. 

ಬಿಎಸ್ ವೈ ಮುಖ್ಯಮಂತ್ರಿಯಾಗುತ್ತಿದ್ದಂತೆ  ಕಳೆದ 2 ದಿನಗಳ ಹಿಂದೆ ಚಿಕ್ಕಮಗಳೂರಿನ ಎಸ್ಪಿಯಾಗಿದ್ದವರನ್ನು ರಾಮನಗರ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿತ್ತು. 

ಅವರ ವರ್ಗಾವಣೆ ಬೆನ್ನಲ್ಲೇ  ಬಹುಮತ ಸಾಬೀತುಪಡಿಸುವ ನಿಟ್ಟಿನಲ್ಲಿ ಹಾಗೂ ಮೈತ್ರಿ ಶಾಸಕರನ್ನು ಸೆಳೆಯುವ ಸಲುವಾಗಿ  ಬಿಎಸ್'ವೈ  ತಮ್ಮ ಆಪ್ತಬಳಗದಲ್ಲಿ ಗುರುತಿಸಿಕೊಂಡವರಿಗೆ ಆಯಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ ಎನ್ನುವ ಆರೋಪವು ಅಂದು ಕೇಳಿ ಬಂದಿತ್ತು. 

ಇದೀಗ ಮತ್ತೆ ವರ್ಗಾವಣೆ ರದ್ದಾಗುವ ಸಾಧ್ಯತೆ ಇದ್ದು, ಇನ್ನೆರಡು ದಿನಗಳಲ್ಲಿ ಮತ್ತೆ ಚಿಕ್ಕಮಗಳೂರಿಗೆ ವಾಪಸಾಗಿ ಅಲ್ಲಿ ಅಣ್ಣಾಮಲೈ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

loader