ದಕ್ಷಿಣ ಸುಡಾನ್'ನ ವೌವು ವಿಮಾನ ನಿಲ್ದಾಣದಲ್ಲಿ ಸೌತ್ ಸುಪ್ರೀಂ ವಿಮಾನವು ಭೂಸ್ಪರ್ಶ ಮಾಡುತ್ತಿರುವ ವೇಳೆ ಘಟನೆ ಸಂಭವಿಸಿದೆ.
ವೌ, ದಕ್ಷಿಣ ಸುಡಾನ್ (ಮಾ.20): 44 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ದ.ಸುಡಾನ್’ನ ವಿಮಾನವೊಂದು ಲ್ಯಾಂಡಿಗ್ ವೇಳೆ ಅಪಘಾತಕ್ಕೊಳಗಾಗಿದೆ. ಆದರೆ ವಿಮಾನದಲ್ಲಿದ ಲ್ಲಾ ಪ್ರಯಾಣಿಕರು ಪವಾಡಸದೃಶ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೌತ್ ಸುಪ್ರೀಮ್ ವಿಮಾನವು ದ.ಸುಡಾನ್’ನ ವೌ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಗ್ ವೇಳೆ ರನ್ ವೇಯಲ್ಲೇ ಪತನವಾಗಿದೆಯೆಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ವಿಮಾನದಲ್ಲಿ 44 ಮಂದಿ ಪ್ರಯಾಣಿಕರಿದ್ದರು, ಯಾವುದೇ ಜೀವಹಾನಿಯಾಗಿಲ್ಲ, ಆದರೆ ಪ್ರಯಾಣಿಕರಿಗೆ ಗಾಯಗಳಾಗಿವೆ ಎನ್ನಲಾಗಿದೆ.
