ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಕೊರಿಯಾ ತನ್ನ ಪರಮಾಣು ಕೇಂದ್ರಗಳಿಗೆ ಭೇಟಿ ಕೊಡಲು ದಕ್ಷಿಣ ಕೊರಿಯಾ ಗೆ ಅವಕಾಶ ಒದಗಿಸಿದೆ. ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಈ ನೆರೆಯ ರಾಷ್ಟ್ರಗಳು ಇದೀಗ ಶಾಂತಿ ಮಾತುಕತೆಗೆ ಒತ್ತು ನೀಡಿರುವುದು ಜಾಗತಿಕವಾಗಿ ಗಮನ ಸೆಳೆದಿದೆ. ಇತ್ತಿಚೀಗಷ್ಟೇ ಉಭಯ ರಾಷ್ಟ್ರಗಳ ನಾಯಕರು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದರು.

ಇದೀಗ ಉ.ಕೊರಿಯಾ ತನ್ನ ಪರಮಾಣು ರಿಯಾಕ್ಟರ್ ಕೇಂದ್ರಗಳಿಗೆ ಭೇಟಿ ನೀಡಲು ದ.ಕೊರಿಯಾಗೆ ಅನುಮತಿ ನೀಡಿರುವುದು ಉತ್ತಮ ಹೆಜ್ಜೆ ಎಂದೇ ತಜ್ಞರು ಬಣ್ಣಿಸಿದ್ದಾರೆ. ದ.ಕೊರಿಯಾದ ಅಧಿಕಾರಿಗಳಷ್ಟೇ ಅಲ್ಲದೇ ಮಾಧ್ಯಮ ಪ್ರತಿನಿಧಿಗಳಿಗೂ ಪರಮಾಣು ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ ಎಂದು ಉ.ಕೊರಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.