ದಕ್ಷಿಣ ಭಾರತದ ಚಿತ್ರಗಳ ಮೇಲೆ ಡಿಜಿಟಲ್‌ ಸೇವಾ ಪೂರೈಕೆದಾರರಿಂದ ವಿಧಿಸಲಾಗಿರುವ ವರ್ಚುವಲ್‌ ಮುದ್ರಣ ಶುಲ್ಕ (ವಿಪಿಎಫ್‌) ವಿರೋಧಿಸಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸುಮಾರು 1,800 ಚಿತ್ರ ಮಂದಿಗಳು ಶುಕ್ರವಾರ ಬಂದ್‌ ಆಗಿವೆ.

ಹೈದರಾಬಾದ್‌: ದಕ್ಷಿಣ ಭಾರತದ ಚಿತ್ರಗಳ ಮೇಲೆ ಡಿಜಿಟಲ್‌ ಸೇವಾ ಪೂರೈಕೆದಾರರಿಂದ ವಿಧಿಸಲಾಗಿರುವ ವರ್ಚುವಲ್‌ ಮುದ್ರಣ ಶುಲ್ಕ (ವಿಪಿಎಫ್‌) ವಿರೋಧಿಸಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸುಮಾರು 1,800 ಚಿತ್ರ ಮಂದಿಗಳು ಶುಕ್ರವಾರ ಬಂದ್‌ ಆಗಿವೆ. ಬೇಡಿಕೆ ಈಡೇರದಿದ್ದಲ್ಲಿ ಕರ್ನಾಟಕದಲ್ಲೂ ಮಾ.9ರಿಂದ ಚಿತ್ರ ಮಂದಿಗಳು ಬಂದ್‌ ನಡೆಸಲಿವೆ.

 ಸೆಟಲೈಟ್‌ ಬಳಸಿ ಥಿಯೇಟರ್‌ಗಳಲ್ಲಿ ಸಿನೆಮಾ ಪ್ರದರ್ಶನಕ್ಕೆ ಉಪಕರಣಗಳನ್ನು ಪೂರೈಸುವ ಸೇವಾ ಪೂರೈಕೆದಾರರು, ಚಿತ್ರ ನಿರ್ಮಾಪಕರು ಮತ್ತು ಚಿತ್ರ ಮಂದಿರಗಳ ಮೇಲೆ ವಿಧಿಸುವ ಶುಲ್ಕವನ್ನು ವಿಪಿಎಫ್‌ ಎನ್ನಲಾಗುತ್ತದೆ.

ಸೇವಾ ಪೂರೈಕೆದಾರರೊಂದಿಗಿನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ಕೊಡಲಾಗಿದೆ ಎಂದು ದಕ್ಷಿಣ ಭಾರತೀಯ ಚಿತ್ರ ನಿರ್ಮಾಪಕರ ಮಂಡಳಿ ಅಧ್ಯಕ್ಷ ಡಿ. ಸುರೇಶ್‌ ಹೇಳಿದ್ದಾರೆ. ಕೇರಳ, ತಮಿಳುನಾಡಿನಲ್ಲೂ ಕೆಲವು ಚಿತ್ರಮಂದಿರಗಳು ಬಂದ್‌ ಆಗಿವೆ.