ಕೆಲವೇ ತಿಂಗಳಲ್ಲಿ ತಾಯಿ ಆಗಲಿರುವ ಸಾನಿಯಾ ಕಾಣಿಸೋದು ಹೀಗೆ..!
ಕೆಲವೇ ತಿಂಗಳಲ್ಲಿ ತಾಯಿಯಾಗಲಿರುವ ಸಾನಿಯಾ ಹೊಸ ಫೋಟೋ
ಸ್ವೆಟರ್ ಧರಿಸಿ ಮುಗುಳ್ನಗುತ್ತಿರುವ ಟೆನ್ನಿಸ್ ತಾರೆ
ತಾಯಿಯಾಗುವ ಅನುಭವ ಹಂಚಿಕೊಂಡ ಸಾನಿಯಾ
ಮಗು ಅಥವಾ ಟೆನ್ನಿಸ್‌ನಲ್ಲಿ ಸಾನಿಯಾ ಪ್ರಥಮ ಆದ್ಯತೆ ಯಾವುದು?
ಮುಂಬೈ(ಜೂ.7): ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಶೀಘ್ರದಲ್ಲೇ ತಾಯಿಯಾಗುತ್ತಿದ್ದಾರೆ. ಈ ಕುರಿತು ಖುದ್ದು ಸಾನಿಯಾ ಇನ್ಸಟಾಗ್ರಾಂ ಮೂಲಕ ಖಚಿತಪಡಿಸಿದ್ದಾರೆ. ತಮ್ಮ ಇನ್ಸಟಾಗ್ರಾಂನಲ್ಲಿ ಸ್ವೆಟರ್ ಹಾಕಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿರುವ ಅವರು, ಬೇಸಿಗೆಯಲ್ಲೂ ಚಳಿಗಾಲದ ಅನುಭವ ಎಂದು ನಗೆ ಬೀರಿದ್ದಾರೆ.
ಸಾನಿಯಾ ಗರ್ಭವತಿಯಾಗಿರುವ ಕುರಿತು ಪತಿ ಶೊಯೆಬ್ ಮಲಿಕ್ ಈ ಹಿಂದೆಯೇ ಟ್ವಿಟ್ ಮಾಡಿ ತಿಳಿಸಿದ್ದರು. ಇದೀಗ ಖುದ್ದು ಸಾನಿಯಾ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
In a winter mood @MirzaSania #seasonswap #repost pic.twitter.com/TuITcmFOc2
— Femina (@FeminaIndia) June 6, 2018
ಗರ್ಭವತಿಯಾಗುವುದು ಎಂದರೆ ಯಾವುದರಿಂದಲೂ ಹಿಂದೆ ಸರಿಯುವುದಲ್ಲ ಎಂದು ಹೇಳಿರುವ ಅವರು, ತಮ್ಮ ದೈನಂದಿನ ಚಟುವಟಿಕೆಗಳಿಗೆ ಮತ್ತು ಇತರ ಜವಾಬ್ದಾರಿಗಳಿಗೆ ಗರ್ಭದಾರಣೆ ಅಡಚಣೆ ಮಾಡಿಲ್ಲ ಎಂದು ಸಾನಿಯಾ ಹೇಳಿದ್ದಾರೆ. ತಾಯಿಯಾಗುವ ಅನುಭವವೇ ವಿಶಿಷ್ಟವಾಗಿದ್ದು, ತಾವು ಈ ಅನುಭವವನ್ನು ಆಸ್ವಾದಿಸುತ್ತಿರುವುದಾಗಿ ಸಾನಿಯಾ ಸಂತಸ ಹಂಚಿಕೊಂಡಿದ್ದಾರೆ.
ಇದೇ ವೇಳೆ ತಾಯಿಯಾದ ಬಳಿಕ ಮಗುವಿನ ಆರೈಕೆಯೇ ತಮ್ಮ ಪ್ರಥಮ ಆದ್ಯತೆ ಎಂದಿರುವ ಸಾನಿಯಾ, ತಮ್ಮ ನೆಚ್ಚಿನ ಟೆನ್ನಿಸ್ ಆದ್ಯತಾ ಪಟ್ಟಿಯಲ್ಲಿ ದ್ವೀತಿಯ ಸ್ಥಾನಕ್ಕೆ ತಳ್ಳಲ್ಪಡಲಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.