ರಾಜ್ಯ ಶೀಘ್ರ ಮತ್ತೊಂದು ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಇದರಲ್ಲಿ ಮತ್ತೆ ಮೈತ್ರಿಯಾಗುವ ಸಾಧ್ಯತೆಯೂ ಹೆಚ್ಚಿದೆ. 

ಬೆಂಗಳೂರು [ಜು.24]: ಮೈತ್ರಿ ಪತನವಾಗಿದೆ. ಅತೃಪ್ತರಾಗಿ ಮುಂಬೈಗೆ ತೆರಳಿರುವವರು ರಾಜೀನಾಮೆ ನೀಡಿದ್ದು, ಇವರ ಸ್ಥಾನಗಳಿಗೆ ಚುನಾವಣೆ ನಡೆದರೆ ಶೀಘ್ರ ಉಪ ಚುನಾವಣೆ ಎದುರಾಗುವ ಸಾಧ್ಯತೆ ಇದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಇನ್ನು ಶೀಘ್ರವೇ ಎದುರಾಗಲಿರುವ ಉಪ ಚುನಾವಣೆ ಸಂದರ್ಭದಲ್ಲೂ ಈ ಮೈತ್ರಿಕೂಟ ಒಗ್ಗೂಡಿ ಕೆಲಸ ಮಾಡುವ ಸಾಧ್ಯತೆ ಕಡಿಮೆ. ಆದರೆ, ಬಿಜೆಪಿಯನ್ನು ಮಣಿಸಬೇಕಾದ ಸವಾಲು ಇರುವ ಕಾರಣ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

ಉಪ ಚುನಾವಣೆಯಲ್ಲಿ ಬಿಜೆಪಿಯು ಹೆಚ್ಚಿನ ಸಂಖ್ಯೆ ಗಳಿಸಲು ಸಾಧ್ಯವಾಗದೇ ಹೋದರೆ ಹೊಸ ಸರ್ಕಾರವು ಪತನಗೊಳ್ಳುವ ಸಾಧ್ಯತೆಯಿರುವುದರಿಂದ ಮೈತ್ರಿಕೂಟವು ಈ ಚುನಾವಣೆಯಲ್ಲಿ ಮತ್ತೆ ಒಗ್ಗೂಡಬಹುದು. ಒಂದು ವೇಳೆ ಮೈತ್ರಿ ಮಾಡಿಕೊಳ್ಳದೆ ಇದ್ದರೂ ಫ್ರೆಂಡ್ಲಿ ಫೈಟ್‌ ಸಾಧ್ಯತೆ ಹೆಚ್ಚಿದೆ.