ಶೀಘ್ರದಲ್ಲೇ ಮತ್ತೆ ಸಚಿವ ಸಂಪುಟ ವಿಸ್ತರಣೆ ..?

news | Thursday, June 7th, 2018
Suvarna Web Desk
Highlights

ಮುಂದಿನ ಹಂತದ ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಲಿದೆಯೇ? ಇಂತಹದೊಂದು ಸಾಧ್ಯತೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ. ಇದಕ್ಕೆ ಕಾರಣ ಉಭಯ ಪಕ್ಷಗಳಿಂದಲೂ ವಿಧಾನ ಪರಿಷತ್ತಿನಿಂದ ಏಕ ಮಾತ್ರ ಸದಸ್ಯೆ ಸಚಿವೆಯಾಗಿರುವುದು. 

ಬೆಂಗಳೂರು :  ಮುಂದಿನ ಹಂತದ ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಲಿದೆಯೇ? ಇಂತಹದೊಂದು ಸಾಧ್ಯತೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ. ಇದಕ್ಕೆ ಕಾರಣ ಉಭಯ ಪಕ್ಷಗಳಿಂದಲೂ ವಿಧಾನ ಪರಿಷತ್ತಿನಿಂದ ಏಕ ಮಾತ್ರ ಸದಸ್ಯೆ ಸಚಿವೆಯಾಗಿರುವುದು. ಹೌದು, ಜಯಮಾಲಾ ಅವರು ಸಚಿವರಾಗಿರುವ ಏಕೈಕ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ವಿಧಾನಮಂಡಲ ಅಧಿವೇಶನ ನಡೆದರೆ ಅವರೇ ಸಭಾನಾಯಕರಾಗ ಬೇಕಾಗುತ್ತದೆ. ಪ್ರಬಲ ಬಿಜೆಪಿ ಪ್ರತಿ ಪಕ್ಷವಾಗಿರುವ ವಿಧಾನ ಪರಿಷತ್ತಿನಲ್ಲಿ ಜಯಮಾಲ ಅವರನ್ನು ಸಭಾನಾಯಕರನ್ನಾಗಿಸಿದರೆ ಸಮರ್ಥವಾಗಿ ಅದನ್ನು ಎದುರಿಸಬಲ್ಲರೇ ಎಂಬ ಬಗ್ಗೆ ಕಾಂಗ್ರೆಸ್ಸಿಗರಿಗೆ ಸಂಶಯವಿದೆ.

ಹೀಗಾಗಿಯೇ ಪರಿಷತ್ತಿನಿಂದ ಮತ್ತೊಬ್ಬರು (ಅವರು ಜೆಡಿಎಸ್ ಅಥವಾ ಕಾಂಗ್ರೆಸ್ ಪೈಕಿ ಒಬ್ಬರಾಗಿ ರಬಹುದು) ಶೀಘ್ರ  ಕುಮಾರಸ್ವಾಮಿ ಸಂಪುಟ ಸೇರಬೇಕಾಗಿ ಬರಬಹುದು. ಅದು ಮುಂದಿನ ಬಜೆಟ್ ಅಧಿವೇಶನದ ಒಳಗೆ ನಡೆಯಬೇಕಾಗುತ್ತದೆ ಎನ್ನುತ್ತವೆ ಮೂಲಗಳು. 

ಪ್ರಸ್ತುತ ಜೆಡಿಎಸ್‌ನಲ್ಲಿ ಒಂದು ಸ್ಥಾನ ಮಾತ್ರ ಖಾಲಿಯಿದ್ದು, ಸಂಪುಟ ಸೇರುವುದಾದರೆ ಎಂ.ಎ.ಫಾರೂಕ್ ಅವರಿಗೆ ಹೆಚ್ಚಿನ ಅವಕಾಶವಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಸವರಾಜ ಹೊರಟ್ಟಿ ಅವರು ಸಭಾ ಪತಿಯಾಗಲು ಒಪ್ಪದ ಪಕ್ಷದಲ್ಲಿ ಅವರನ್ನು ಜೆಡಿಎಸ್ ವರಿಷ್ಠರು ಸಚಿವ ಸ್ಥಾನಕ್ಕೆ ಪರಿಗಣಿಸಬಹುದು. ಹೀಗಾದಲ್ಲಿ ಫಾರೂಕ್ ಅಥವಾ ಹೊರಟ್ಟಿ ಪೈಕಿ ಒಬ್ಬರು ಸಭಾನಾಯಕರಾದರೆ, ಕಾಂಗ್ರೆಸ್‌ನಿಂದ ಶೀಘ್ರ ಸಂಪು ಟಕ್ಕೆ ಸಚಿವರನ್ನು ಸೇರ್ಪಡೆ ಮಾಡುವ ಅನಿವಾ ರ್ಯತೆ ಇರುವುದಿಲ್ಲ. ಆದರೆ, ಖಾಲಿಯಿರುವ ಒಂದು ಸ್ಥಾನ ವನ್ನು ತುಂಬಲು ಜೆಡಿಎಸ್ ಹಿಂಜರಿದರೆ ಆಗ ಕಾಂಗ್ರೆಸ್ ಅನಿವಾರ್ಯವಾಗಿ ಪರಿಷತ್ತಿನಿಂದ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕಾಗುತ್ತದೆ. 

ಈಗಾಗಲೇ, ಎಸ್.ಆರ್. ಪಾಟೀಲ್, ಉಗ್ರಪ್ಪ, ಎಚ್.ಎಂ. ರೇವಣ್ಣ, ರಘು ಆಚಾರ್ ಸೇರಿದಂತೆ ಹಲವರು ಸಚಿವ ಸ್ಥಾನದ  ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಒಬ್ಬರಿಗೆ ಅವಕಾಶ ದೊರೆಯಬಹುದು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR