ಭ್ರಷ್ಟಾಚಾರ, ಕೋಟಾ ನೋಟು ಚಲಾವಣೆ ವಿರುದ್ಧ ಮತ್ತು ದೇಶದ ಆಂತರಿಕ ಮತ್ತು ವಿಚ್ಛಿದ್ರಕಾರಿ ಶಕ್ತಿಗಳಿಗೆ ಸರಬರಾಜಾಗುತ್ತಿದ್ದ ಹಣ ತಡೆಯುವುದು ನೋಟು ಬದಲಾವಣೆ ಹಿಂದಿನ ಉದ್ದೇಶ. ಒಂದು ಹಂತದಲ್ಲಿ ಗ್ರಾಮೀಣರು, ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ತೊಂದರೆಯಾಗಿದೆ. ಯಾವ ದೇಶದಲ್ಲೂ ಇಂತಹ ದಿಟ್ಟ ಕ್ರಮ ಕೈಗೊಂಡಿಲ್ಲ. ಈಗಿನ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಆನ್‌ಲೈನ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಮೊಬೈಲ್ ಬಳಸಿ ವ್ಯವಹರಿಸುತ್ತಿರುವವರಿಗೆ ಯಾವುದೇ ತೊಂದರೆಯಾಗಿಲ್ಲ

-ವಿಘ್ನೇಶ್ ಎಂ.ಭೂತನಕಾಡು ಮಡಿಕೇರಿ

ನೋಟುಗಳ ಬದಲಾವಣೆ ದೇಶದ ಆರ್ಥಿಕ ಹಾಗೂ ಡಿಜಿಟಲ್ ವ್ಯವಸ್ಥೆಯ ದೈತ್ಯ ಹೆಜ್ಜೆಯಾಗಿದೆ. ಮುಂದಿನ ಒಂದು ತಿಂಗಳಲ್ಲಿ ಪ್ರಸ್ತುತ ಆರ್ಥಿಕ ವ್ಯವಸ್ಥೆಯ ಸಂಕಷ್ಟ, ನೋಟು ಬದಲಾವಣೆ ವ್ಯವಸ್ಥೆ ಹಾಗೂ ಒಟ್ಟು ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆ ಕಾಣಲಿದೆ. ನಗದುರಹಿತ ವ್ಯವಹಾರಕ್ಕೆ ಪ್ರಧಾನಿ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

ಸುಂಟಿಕೊಪ್ಪ ಸಮೀಪದ ಮತ್ತಿಕಾಡು ತೋಟದಲ್ಲಿ ವಾಸ್ತವ್ಯವಿರುವ ಅವರನ್ನು ಸುವರ್ಣ ನ್ಯೂಸ್ ಸೋದರ ಪತ್ರಿಕೆ ‘ಕನ್ನಡಪ್ರಭ’ ಗುರುವಾರ ಮಾತನಾಡಿಸಿದಾಗ, ಆರ್ಥಿಕ ವ್ಯವಸ್ಥೆ ಬದಲಾವಣೆಯ ರಹಸ್ಯ ಕಾರ್ಯಾಚರಣೆ ಅಗತ್ಯವಾಗಿದೆ. ಈಗ ನೋಟುಗಳು ಮುದ್ರಣಗೊಂಡು ಬ್ಯಾಂಕ್ ಮತ್ತು ಎಟಿಎಂಗಳಿಗೆ ಬರುತ್ತಿದ್ದು ಒಂದು ತಿಂಗಳಲ್ಲಿ ಎಲ್ಲ ಸಮಸ್ಯೆಗಳು ಬಗೆಯರಿಯಲಿವೆ ಎಂದರು.

ಬದಲಾವಣೆ ಹಿಂದಿನ 3 ಉದ್ದೇಶ

ಭ್ರಷ್ಟಾಚಾರ, ಕೋಟಾ ನೋಟು ಚಲಾವಣೆ ವಿರುದ್ಧ ಮತ್ತು ದೇಶದ ಆಂತರಿಕ ಮತ್ತು ವಿಚ್ಛಿದ್ರಕಾರಿ ಶಕ್ತಿಗಳಿಗೆ ಸರಬರಾಜಾಗುತ್ತಿದ್ದ ಹಣ ತಡೆಯುವುದು ನೋಟು ಬದಲಾವಣೆ ಹಿಂದಿನ ಉದ್ದೇಶ. ಒಂದು ಹಂತದಲ್ಲಿ ಗ್ರಾಮೀಣರು, ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ತೊಂದರೆಯಾಗಿದೆ. ಯಾವ ದೇಶದಲ್ಲೂ ಇಂತಹ ದಿಟ್ಟ ಕ್ರಮ ಕೈಗೊಂಡಿಲ್ಲ. ಈಗಿನ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಆನ್‌ಲೈನ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಮೊಬೈಲ್ ಬಳಸಿ ವ್ಯವಹರಿಸುತ್ತಿರುವವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದರು.

ಜನ ಹೊಂದಿಕೊಳ್ಳುತ್ತಾರೆ

2001-02ರಲ್ಲಿ ನಾನು ಐಸಿಐಸಿಐ ಬ್ಯಾಂಕ್ ಅಧ್ಯಕ್ಷನಾಗಿದ್ದಾಗ ದೇಶದಲ್ಲಿ 1,000 ಎಟಿಎಂ ಶಾಖೆ ತೆರೆಯುವ ಉದ್ದೇಶಕ್ಕೆ ಜನ ನಕ್ಕಿದ್ದರು. ಆದರೆ ಈಗ ಏನಾಗಿದೆ? ಹಂತ ಹಂತವಾಗಿ ಎಲ್ಲಾ ವರ್ಗದ ಜನರು ಡಿಜಿಟಲ್ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅನಿವಾರ್ಯ. ನಮ್ಮ ಆರ್ಥಿಕ ವ್ಯವಸ್ಥೆ ಅತ್ಯುತ್ತಮವಾಗುತ್ತದೆ.

ನೋಟು ಬದಲಾವಣೆ ಎಂಬ ಅಸ

ವಿದೇಶದಲ್ಲಿರುವ ಕಪ್ಪುಹಣ ತರುವ ಬದಲು ಪ್ರಧಾನಿ ಮೋದಿ ದೇಶದ ಅರ್ಥ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ಹಾಗೂ ಸಂಪತ್ತನ್ನು ಘೋಷಿಸಿ ಎಂದು ಹೇಳಿದ್ದರು, ಬಳಿಕ ಕಪ್ಪು ಹಣ ಹೊಂದಿರುವವರು ಅದನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ಕೊಟ್ಟರು. ಅದ್ಯಾವುದೂ ಪ್ರಯೋಜನವಾಗಲಿಲ್ಲ. ಕೊನೆಗೆ ಮೋದಿ ಅವರು ನೋಟು ಬದಲಾವಣೆ ಅಸ ಪ್ರಯೋಗಿಸಿದ್ದು ಫಲ ನೀಡಿದೆ. ಜನಸಾಮಾನ್ಯರಿಗೆ ಇದರ ಫಲಶ್ರುತಿ ಕಾಣಲು 6 ತಿಂಗಳಿನಿಂದ ಒಂದು ವರ್ಷ ಬೇಕು. ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾದಾಗ ಎಲ್ಲಾ ವರ್ಗದವರು ಸಂತೋಷದಿಂದ ಈ ಬದಲಾವಣೆ ಸ್ವೀಕರಿಸುತ್ತಾರೆ ಎಂದರು.

ಬ್ರಿಕ್ಸ್ ಬ್ಯಾಂಕ್ ಸ್ವಾಗತ

ಬ್ರಿಕ್ಸ್ ಬ್ಯಾಂಕ್ ಮತ್ತು ಸದಸ್ಯ ರಾಷ್ಟ್ರಗಳು ನೋಟು ಬದಲಾವಣೆಯನ್ನು ಧನತ್ಮಾಕವಾಗಿ ತೆಗೆದುಕೊಂಡಿದ್ದು, ಭ್ರಷ್ಟಾಚಾರ ನಿಗ್ರಹ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟ ಸವಾಲಿನ ಕೆಲಸ ಎಂದು ಬಣ್ಣಿಸಿವೆ. ಆದರೆ ಇದು ಅನಿವಾರ್ಯವಾಗಿತ್ತು. ಬ್ರಿಕ್ಸ್ ಬ್ಯಾಂಕ್ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ವಿಶ್ವದಲ್ಲಿ ಹಸುರೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಬೃಹತ್ ಯೋಜನೆಗಳನ್ನಿಟ್ಟುಕೊಂಡು ಬ್ರಿಕ್ಸ್ ಬ್ಯಾಂಕ್‌ಗೆ ‘ಹೊಸ ಅಭಿವೃದ್ಧಿ ಬ್ಯಾಂಕ್’ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ 450 ಮಿಲಿಯನ್ ಡಾಲರ್ ಸಾಲ ಯೋಜನೆ ಮಾಡಿದ್ದು, ಈ ವರ್ಷಕ್ಕೆ 1,500 ಮಿಲಿಯನ್ ಡಾಲರ್ ಸಾಲ ಯೋಜನೆ ತಯಾರಿಸಲಾಗಿದೆ. ಭಾರತಕ್ಕೆ ಸೋಲಾರ್ ಮತ್ತು ರಸ್ತೆಗಳ ಅಭಿವೃದ್ಧಿಗೆ ಎರಡು ಸಾಲ ಯೋಜನೆ ತಯಾರಿಸಿದ್ದು, ಇವುಗಳ ಒಟ್ಟು ವೌಲ್ಯ 600 ಮಿಲಿಯನ್ ಡಾಲರ್ ಎಂದರು