Asianet Suvarna News Asianet Suvarna News

ಡ್ರೈವಿಂಗ್ ಲೈಸೆನ್ಸ್'ಗೂ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ

ಪಾನ್ ಕಾರ್ಡ್, ಬ್ಯಾಂಕ್ ಅಕೌಂಟ್, ಆದಾಯ ತೆರಿಗೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದಾಯ್ತು, ಈಗ ಡ್ರೈವಿಂಗ್ ಲೈಸೆನ್ಸ್’ಗೂ ಕೂಡಾ ಆಧಾರ್ ಕಾರ್ಡನ್ನು ಸದ್ಯದಲ್ಲಿಯೇ ಸರ್ಕಾರ ಲಿಂಕ್ ಮಾಡಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

Soon Aadhaar to be linked with driver licence says Union minister RS Prasad

ನವದೆಹಲಿ (ಸೆ.15): ಪಾನ್ ಕಾರ್ಡ್, ಬ್ಯಾಂಕ್ ಅಕೌಂಟ್, ಆದಾಯ ತೆರಿಗೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದಾಯ್ತು, ಈಗ ಡ್ರೈವಿಂಗ್ ಲೈಸೆನ್ಸ್’ಗೂ ಕೂಡಾ ಆಧಾರ್ ಕಾರ್ಡನ್ನು ಸದ್ಯದಲ್ಲಿಯೇ ಸರ್ಕಾರ ಲಿಂಕ್ ಮಾಡಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಡ್ರೈವಿಂಗ್ ಲೈಸೆನ್ಸ್’ಗೂ ಆಧಾರ್ ಕಾರ್ಡ್ ಜೋಡಣೆ ಮಾಡುವ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಮಾತುಕತೆ ನಡೆಸಿದ್ದೇನೆ. ಸದ್ಯದಲ್ಲಿಯೇ ಜಾರಿಗೆ ಬರಲಿದೆ.  ಉತ್ತಮ ಆಡಳಿತಕ್ಕೆ ಮತ್ತು ಸಬಲೀಕರಣಕ್ಕೆ ಆಧಾರ್ ಕಾರ್ಡ್ ಸಾಧನವಾಗಲಿದೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಆಧಾರ್ ಕಾರ್ಡ್ ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಮಾಡುತ್ತದೆಯೇ, ಖಾಸಗಿ ಮಾಹಿತಿಗೆ ಭದ್ರತೆ ಇದೆಯೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಇನ್ನೂ ತೀರ್ಪು ನೀಡಿಲ್ಲ. ಖಾಸಗಿತನ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಕಳೆದ ತಿಂಗಳು ಹೇಳಿದೆ. ಏತನ್ಮಧ್ಯೆ ಸರ್ಕಾರ ಡ್ರೈವಿಂಗ್ ಲೈಸೆನ್ಸ್’ಗೂ ಲಿಂಕ್ ಮಾಡಲು ಮುಂದಾಗಿದೆ.     

Follow Us:
Download App:
  • android
  • ios