Asianet Suvarna News Asianet Suvarna News

ಆಜಾನ್ ವಿವಾದ: ತಲೆಬೋಳಿಸಿಕೊಂಡ ಸೋನು ನಿಗಂ

ಮಸೀದಿಗಳಲ್ಲಿ ಮುಂಜಾನೆ ಆಜಾನ್ ನೀಡುವಾಗ ಧ್ವನಿವರ್ಧಕ ಬಳಸುವ ಬಗ್ಗೆ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿರುವ ಖ್ಯಾತ ಗಾಯಕ ಸೋನು ನಿಗಂ ಮಾಧ್ಯಮದೆದುರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.  ಆಜಾನ್  ಮುಖ್ಯ ಧ್ವನಿವರ್ಧಕವಲ್ಲ ಅದೇ ರೀತಿ ಆರತಿ ಮುಖ್ಯವೇ ಹೊರತು ಧ್ವನಿವರ್ಧಕವಲ್ಲ ಎಂದು ಹೇಳಿದ್ದಾರೆ. 

Sonu Nigam shaves off his head insists that he  not anti Muslim

ನವದೆಹಲಿ (ಏ.19): ಮಸೀದಿಗಳಲ್ಲಿ ಮುಂಜಾನೆ ಆಜಾನ್ ನೀಡುವಾಗ ಧ್ವನಿವರ್ಧಕ ಬಳಸುವ ಬಗ್ಗೆ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿರುವ ಖ್ಯಾತ ಗಾಯಕ ಸೋನು ನಿಗಂ ಮಾಧ್ಯಮದೆದುರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.  ಆಜಾನ್  ಮುಖ್ಯ ಧ್ವನಿವರ್ಧಕವಲ್ಲ ಅದೇ ರೀತಿ ಆರತಿ ಮುಖ್ಯವೇ ಹೊರತು ಧ್ವನಿವರ್ಧಕವಲ್ಲ ಎಂದು ಹೇಳಿದ್ದಾರೆ. 

ಸೋನು ನಿಗಮ್ ಹೇಳಿಕೆಯನ್ನು ಖಂಡಿಸಿ, ಇವರ ತಲೆ ಬೋಳಿಸಿದವರಿಗೆ 10 ಲಕ್ಷ ಬಹುಮಾನ ಕೊಡುವುದಾಗಿ ಮೌಲ್ವಿಯೊಬ್ಬರು ಆಫರ್ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸೋನು ನಿಗಮ್ ತಮ್ಮ ಹೇರ್ ಸ್ಟೈಲಿಸ್ಟ್  ಆಲಿಮ್ ಹಕೀಂರಿಂದ ತಲೆ ಬೋಳಿಸಿಕೊಂಡಿದ್ದಾರೆ.

ಇಂತದ್ದೊಂದು ಸರಳ ವಿಚಾರ ಇಷ್ಟೊಂದು ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತದೆಂದು ನಿರೀಕ್ಷಿಸಿರಲಿಲ್ಲ. ತನ್ನನ್ನು ಮುಸ್ಲೀಂ ವಿರೋಧಿ ಹಣೆಪಟ್ಟಿ ಕಟ್ಟಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ಮಹಮ್ಮದ್ ರಫಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ. ನನ್ನ ಕಾರಿನ ಡ್ರೈವರ್ ಕೂಡಾ ಮುಸ್ಲೀಂ. ನಾನು ಸಾಮಾಜಿಕ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡಿದನೇ ಹೊರತು ಧಾರ್ಮಿಕ ಹಿನ್ನೆಲೆಯಲ್ಲಲ್ಲ.  ನಾನು ಜಾತ್ಯಾತೀತನು ಎಂದು ಸೋನು ನಿಗಂ ಮಾಧ್ಯಮದೆದುರು ಹೇಳಿದ್ದಾರೆ.

ತಲೆ ಬೋಳಿಸಿಕೊಂಡಿರುವುದರ ಬಗ್ಗೆ, ಮೌಲ್ವಿಯವರ ಹೇಳಿಕೆಗೆ ನಾನು ಸವಾಲಾಗಿ ಇದನ್ನು ತೆಗೆದುಕೊಂಡಿಲ್ಲ. ಒಬ್ಬ ಮುಸ್ಲೀಂ ಕೂಡಾ ನನ್ನ ತಲೆಕೂದಲನ್ನು ಕತ್ತರಿಸಬಹುದು ಎಂದು ತೋರಿಸುವುದಕ್ಕೆ ತಲೆ ಬೋಳಿಸಿಕೊಂಡೆ. ನನ್ನ ಧರ್ಮವೇ ಶ್ರೇಷ್ಠ ಎಂದು ನಾನು ನಂಬುವುದಿಲ್ಲ.ಅದೇ ರೀತಿ ನಿಮ್ಮ ಧರ್ಮವೂ ಶ್ರೇಷ್ಠ ಎಂದು ನಂಬುವುದಿಲ್ಲ. ಧರ್ಮಾಂಧತೆಯ ವಿರುದ್ಧ ನೀವು ಹೋರಾಡಬೇಕು ಎಂದು ಸೋನು ನಿಗಂ ಹೇಳಿದ್ದಾರೆ.

 

Follow Us:
Download App:
  • android
  • ios