ಟ್ವಿಟರ್ ಖಾತೆಯನ್ನು ಅಳಿಸಿಹಾಕುವ ಮುನ್ನ 24 ಸರಣಿ ಟ್ವೀಟ್’ಗಳನ್ನು ಮಾಡಿದ ಸೋನು ನಿಗಮ್, ಇನ್ನೋರ್ವ ಗಾಯಕ/ ಸಹೋದ್ಯೋಗಿ ಅಭಿಜಿತ್ ಭಟ್ಟಾಚಾರ್ಯರ ಟ್ವಿಟರ್ ಖಾತೆ ಅಮಾನತುಗೊಂಡಿರುವ ಹಾಗೂ ಬಿಜೆಪಿ ಸಂಸದ ಪರೇಶ್ ರಾವಲ್ ವಿರುದ್ಧ ಟ್ವಿಟರ್’ನಲ್ಲಿ ಆಗಿರುವ ಟೀಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟರ್’ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವವಿಲ್ಲ ಎಂಬ ಕಾರಣ ನೀಡಿ ಖ್ಯಾತ ಗಾಯಕ ಸೋನು ನಿಗಮ್ ತಮ್ಮ ಖಾತೆಯನ್ನು ಇಂದು ಅಳಿಸಿ ಹಾಕಿದ್ದಾರೆ.
ಟ್ವಿಟರ್ ಖಾತೆಯನ್ನು ಅಳಿಸಿಹಾಕುವ ಮುನ್ನ 24 ಸರಣಿ ಟ್ವೀಟ್’ಗಳನ್ನು ಮಾಡಿದ ಸೋನು ನಿಗಮ್, ಇನ್ನೋರ್ವ ಗಾಯಕ/ ಸಹೋದ್ಯೋಗಿ ಅಭಿಜಿತ್ ಭಟ್ಟಾಚಾರ್ಯರ ಟ್ವಿಟರ್ ಖಾತೆ ಅಮಾನತುಗೊಂಡಿರುವ ಹಾಗೂ ಬಿಜೆಪಿ ಸಂಸದ ಪರೇಶ್ ರಾವಲ್ ವಿರುದ್ಧ ಟ್ವಿಟರ್’ನಲ್ಲಿ ಆಗಿರುವ ಟೀಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಎನ್’ಯು ವಿದ್ಯಾರ್ಥಿನಿ ಶೆಹ್ಲಾ ರಾಶಿದ್ ಬಗ್ಗೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅಸಭ್ಯವಾಗಿ ನಿಂದಿಸಿರುವ ಹಿನ್ನೆಲೆಯಲ್ಲಿ ಟ್ವಿಟರ್ ಅವರ ಖಾತೆಯನ್ನು ನಿನ್ನೆ ಅಮಾನತ್ತಿನಲ್ಲಿಟ್ಟಿದೆ.
ಟ್ವಿಟರ್ ಇಂದು ಏಕಪಕ್ಷೀಯವಾಗಿದೆ ಹಾಗೂ ಇಲ್ಲಿ ಪ್ರತಿಯೊಬ್ಬರು ಆಕ್ರೋಶದಿಂದಿದ್ದಾರೆ, ಎಂದು 6.5 ಮಿಲಿಯನ್ ಫಾಲೋವರ್’ಗಳನ್ನು ಹೊಂದಿರುವ ಸೋನು ನಿಗಮ್ ಹೇಳಿ ಟ್ವಿಟರ್’ಗೆ ವಿದಾಯ ಕೋರಿದ್ದಾರೆ.
ಕೆಲದಿನಗಳ ಹಿಂದೆ ಮಸೀದಿಗಳ ಆಜಾನ್’ನ್ನು ಗೂಂಡಾಗಿರಿಗೆ ಹೋಲಿಸಿ ಸೋನು ನಿಗಮ್ ಮಾಡಿದ್ದ ಟ್ವೀಟ್’ಗಳು ವಿವಾದ ಸೃಷ್ಟಿಸಿದ್ದವು. ಆದರೆ ಸೋನು ನಿಗಮ್ ಫೇಸ್’ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳು ಸಕ್ರಿಯವಾಗಿವೆ.