ಸೋನು ನಿಗಮ್'ರ ಈ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಕೊಂಡ ಕೆಲಕ್ಷಣಗಳಲ್ಲೇ ಅವರ ಸಾಕಷ್ಟು ಅಭಿಮಾನಿಗಳು ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಏ.17): ಖ್ಯಾತ ಗಾಯಕ ಸೋನು ನಿಗಮ್ ಇಂದು ಮುಂಜಾನೆ ಮಾಡಿದ ಟ್ವೀಟ್'ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಮುಸ್ಲೀಮರು ಮುಂಜಾನೆ ಮಾಡುವ ಪ್ರಾರ್ಥನೆಗೆ ನಾನು ಇಸ್ಲಾಂ ಧರ್ಮದವನಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಏಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

"ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ನಾನು ಮಸ್ಲಿಂ ಅಲ್ಲ, ಆದರೂ ಆಜಾನ್ ಕೂಗಿಗೆ ಮುಂಜಾನೆಯೇ ಏಳಬೇಕಾಗಿದೆ. ದೇಶದಲ್ಲಿ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಡೆಯುವ ಇಂತಹ ಒತ್ತಾಯಪೂರ್ವಕ ಕೃತ್ಯಗಳಿಗೆ ಇತಿಶ್ರೀ ಹೇಳುವುದು ಯಾವಾಗ" ಎಂದು ಪ್ರಶ್ನಿಸಿದ್ದಾರೆ.

ಸೋನು ನಿಗಮ್'ರ ಈ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಕೊಂಡ ಕೆಲಕ್ಷಣಗಳಲ್ಲೇ ಅವರ ಸಾಕಷ್ಟು ಅಭಿಮಾನಿಗಳು ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದನ್ ಚೌಹಾನ್ ಎಂಬಾತ ನಾನು ನಿಮ್ಮ ಅಭಿಮಾನಿ. ಆದರೆ ನಿಮ್ಮ ಈ ಹೇಳಿಕೆ ನಿಜಕ್ಕೂ ಅರ್ಥಹೀನವಾದದ್ದು. ಬೇರೆಯವರ ಧಾರ್ಮಿಕ ನಂಬಿಕೆಗಳಿಗೂ ಗೌರವ ನೀಡಿ. ಇದು ಪ್ರಜಾಪ್ರಭುತ್ವ ದೇಶ ಎಂದು ಟ್ಚೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.