ನವದೆಹಲಿ(ಜು.21): ತೀವ್ರ ಅನಾರೋಗ್ಯದಿಂದ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕಿ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ನೆನೆದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದಾರೆ.

ಶೀಲಾ ದೀಕ್ಷಿತ್ ನಿಧನಕ್ಕೆ ಸಂತಾಪ ಸೂಚಿಸಿ ಅವರ ಕುಟುಂಬಕ್ಕೆ ಸೋನಿಯಾ ಗಾಂಧಿ ಪತ್ರ ಬರೆದಿದ್ದು, ತಮ್ಮ ಹಾಗೂ ಶೀಲಾ ದೀಕ್ಷಿತ್ ಒಡನಾಟವನ್ನು ತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.


ಭೌತಿಕ ಜಗತ್ತು ಮಾತ್ರ ಶೀಲಾ ದೀಕ್ಷಿತ್ ಇನ್ನಿಲ್ಲವೆಂಬುದನ್ನು ಒಪ್ಪಿಕೊಳ್ಳುವುದೇ ಹೊರತು, ಅವರು ತಮ್ಮ ಅಂತರಾಳದಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ಹಾಗೂ ಶೀಲಾ ದೀಕ್ಷಿತ್ ನಡುವಿನ ದೀರ್ಘ ಕಾಲದ ಒಡನಾಟವನ್ನು ಸ್ಮರಿಸಿರುವ ಸೋನಿಯಾ, ತಮ್ಮ ಪತಿ ರಾಜೀವ್ ಗಾಂಧಿ ಅವರೊಂದಿಗೂ ಶೀಲಾ ದೀಕ್ಷಿತ್ ಉತ್ತಮ ಒಡನಾಟ ಹೊಂದಿದ್ದರು ಎಂದು ತಿಳಿಸಿದ್ದಾರೆ.

ದೆಹಲಿಯ ಅಭಿವೃದ್ಧಿಯಲ್ಲಿ ಶೀಲಾ ದೀಕ್ಷಿತ್ ಕೊಡುಗೆ ಅಪಾರವಾಗಿದ್ದು, ರಾಷ್ಟ್ರ ರಾಜಧಾನಿ ಸದಾ ಶೀಲಾ ದೀಕ್ಷಿತ್ ಅವರನ್ನು ನೆನೆಸಿಕೊಳ್ಳಲಿದೆ ಎಂದು ಸೋನಿಯಾ ಅಭಿಪ್ರಾಪಟ್ಟಿದ್ದಾರೆ.

ಕಾಂಗ್ರೆಸ್ ಕಟ್ಟಾಳುವಾಗಿದ್ದ ಶೀಲಾ, ತಮ್ಮ ಕೊನೆಯುಸಿರುವವರೆಗೂ ಪಕ್ಷಕ್ಕೆ ನಿಷ್ಠರಾಗಿ ದುಡಿದರು ಎಂದು ಸೋನಿಯ ತಮ್ಮ ಪತ್ರದಲ್ಲಿ ಹಿರಿಯ ನಾಯಕಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.