ನವದೆಹಲಿ: ಒಂದೇ ಕುಟುಂಬದ ಸೊಸೆಯಂದಿರಾಗಿದ್ದರೂ, ಪರಸ್ಪರ ಭೇಟಿಯಾಗದೆ ವರ್ಷಗಳೇ ದಾಟಿರುವ ನಡುವೆಯೇ, ಮನೇಕಾ ಗಾಂಧಿ ಅವರ ಸಚಿವಾಲಯದ ಕಾರ್ಯಕ್ರಮವೊಂದಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ದಿಢೀರ್‌ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಮಹಿಳಾ ಉದ್ಯಮಿಗಳು ಮತ್ತು ಸಾವಯವ ರೈತರ ಉತ್ಪನ್ನ ಮಾರಾಟ ಉತ್ತೇಜಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ದೆಹಲಿಯಲ್ಲಿ 10 ದಿನಗಳ ಮೇಳ ಆಯೋಜಿಸಿದೆ. 

ಬುಧವಾರ ಬೆಳಗ್ಗೆ ಈ ಮೇಳಕ್ಕೆ ದಿಢೀರ್‌ ಆಗಮಿಸಿದ ಸೋನಿಯಾ, ಒಂದೂವರೆ ಗಂಟೆ ಅಲ್ಲೇ ಸುತ್ತಾಡಿ, ಕೆಲವೊಂದಿಷ್ಟುವಸ್ತುಗಳನ್ನು ಖರೀದಿಸಿ ತೆರಳಿದ್ದಾರೆ. ಅವರ ಭೇಟಿಯಿಂದ ಕಾರ್ಯಕ್ರಮ ಆಯೋಜಕರು ಅಚ್ಚರಿಗೆ ಗುರಿಯಾದರು.