ನವದೆಹಲಿ[ಡಿ.03] ಡಿಸೆಂಬರ್ 10 ರಂದು ನಡೆಯಲಿರುವ ಬಿಜೆಪಿ ವಿರೋಧಿ ಪಕ್ಷಗಳ ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ಸಹ ಸಭೆಯಲ್ಲಿ ಭಾಗವಹಿಸುವುದು ಖಚಿತವಾಗಿದೆ.

ತೆಲಗು ದೇಶಂ ಪಕ್ಷದ ಅಧ್ಯಕ್ಷ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಎನ್‌ಡಿಎ ಮತ್ತು ಬಿಜೆಪಿ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬ ವಿಚಾರಗಳ ರೂಪು ರೇಷೆ ಸಿದ್ಧವಾಗಲಿದೆ.

ಕೊನೆಗೂ ಬಯಲಾಯ್ತು ಪ್ರಧಾನಿ ಮೋದಿಯ ಸಂಬಳ!

ಚಂದ್ರಬಾಬು ನಾಯ್ಡು ಲೋಕಸಭಾ ಚುನಾವಣೆಗೆ ತಿಂಗಳುಗಳು ಇರುವಾಗಲೇ ದೇಶಾದ್ಯಂತ ತಿರುಗಾಟ ನಡೆಸುತ್ತಿದ್ದಾರೆ. ಎನ್‌ಸಿಪಿಯ ಶರದ್ ಪವಾರ್ ಅವರನ್ನು, ಡಿಎಂಕೆಯ ಎಂಕೆ ಸ್ಟಾಲಿನ್ ಅವರನ್ನು ಸಹ ಕೈಜೋಡಿಸಲು ಕೇಳಿಕೊಂಡಿದ್ದಾರೆ.

ಪಂಚರಾಜ್ಯಗಳ ಫಲಿತಾಂಶ ಡಿಸೆಂಬರ್ 11ಕ್ಕೆ ಪ್ರಕಟವಾಗಲಿದ್ದು ಒಂದು ದಿನ ಮುಂಚಿತವಾಗಿಯೇ ಸಭೆ ನಡೆಸಲು ಚಂದ್ರಬಾಬು ಸಿದ್ಧತೆ ಮಾಡಿಕೊಂಡಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರನ್ನು ಸಹ ಬೆಂಗಳೂರಿಗೆ ಬಂದು ನಾಯ್ಡು ಭೇಟಿಯಾಗಿ ತೆರಳಿದ್ದರು.